ಬೆಂಗಳೂರು : ‘ವೀರಶೈವ ಲಿಂಗಾಯಿತ” ಹಿಂದು ಸಂಸ್ಕೃತಿಯ ಭಾಗವಾಗಿದೆ , ಲಿಂಗಾಯಿತ, ವೀರಶೈವ ಹಿಂದುತ್ವದ ಭಾಗವೇ ಹೊರತು ಬೇರೆಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಲಿಂಗಾಯಿತರು ಹಿಂದೂಗಳಲ್ಲ ಎಂಬ ಕೆಲವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು, ಹಿಂದೆ ಪ್ರತ್ಯೇಕ ಧರ್ಮದ ರೂವಾರಿಯಾಗಿದ್ದ ಸಿದ್ದರಾಮಯ್ಯನವರ ಯೋಜನೆಯ ಮುಂದುವರೆದ ಭಾಗವಾಗಿದೆ. ಹಿಂದುತ್ವ ಈ ನೆಲದ ಆತ್ಮ, ಬಸವಣ್ಣನವರು ಆರಾಧಿಸಿದ ಲಿಂಗವೂ ಈಶ್ವರನ ಅಂಶವೇ, ಹಿಂದುತ್ವ ಬದುಕುವ ದಾರಿ. ಜಗತ್ತಿನ ಯಾವುದಾದರೂ ಧರ್ಮ ಇನ್ನೊಬ್ಬರ ಮೇಲೆ ದಾಳಿ ಮಾಡದೆ, ಎಲ್ಲರನ್ನು ಗೌರವಿಸಿರುವುದು ಹಿಂದುತ್ವ ಮಾತ್ರ ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಲಿಂಗಾಯಿತ, ವೀರಶೈವ ಹಿಂದುತ್ವದ ಭಾಗವೇ ಹೊರತು ಬೇರೆಯಲ್ಲ. 2018ರ ವಿಧಾನಸಭೆ ಚುನಾವಣೆಗಾಗಿ ಸಿದ್ದರಾಮಯ್ಯನವರು ಈ ಗೊಂದಲವನ್ನು ಸೃಷ್ಟಿ ಮಾಡಿದ್ದರು, ಈಗ ಲೋಕಸಭೆ ಚುನಾವಣೆಗೆ ಬೇರೆಯಾವುದೇ ಚರ್ಚಾ ವಿಷಯವಿಲ್ಲದೆ ಈ ಪ್ರತ್ಯೇಕ ಧರ್ಮದ ಚರ್ಚೆ ಆರಂಭಿಸಿದ್ದಾರೆ. ಪಂಚಪೀಠಗಳು, ಬಸವಣ್ಣನವರ ಅನುಯಾಯಿಗಳು ಹಾಗು ಶರಣರ ತತ್ವಗಳು ಎಲ್ಲವೂ ಹಿಂದೂ ಸಂಸ್ಕೃತಿಯ ಭಾಗವೇ, ಅಲ್ಲಿಯೂ ಶಿವ, ಇಲ್ಲಿಯೂ ಶಿವನೇ! ” ವೀರಶೈವ ಲಿಂಗಾಯಿತ” ಹಿಂದು ಸಂಸ್ಕೃತಿಯ ಭಾಗವಾಗಿದೆ. ಹರ ಹರ ಮಹದೇವ್! ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.