ಬುಧವಾರ ಹುತಾತ್ಮರಾದ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ಪಾರ್ಥಿವ ಶರೀರವನ್ನು ದೆಹಲಿಗೆ ಸಾಗಿಸುವ ಮುನ್ನ ತಮಿಳುನಾಡಿನ ಕೊಯಮತ್ತೂರಿನ ರಸ್ತೆಗಳ ಮೂಲಕ ಕರೆದೊಯ್ಯುತ್ತಿದ್ದ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು, ಅಗಲಿದ ದಂಡನಾಯಕನಿಗೆ ಪುಷ್ಪನಮನ ಸಲ್ಲಿಸಿ, ಜೈಕಾರಗಳನ್ನು ಕೂಗಿದ್ದಾರೆ.
ಆನ್ಲೈನ್‌ನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ರಾವತ್‌ರ ಪಾರ್ಥಿವ ಶರೀರ ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ಪುಷ್ಪನಮನ ಸಲ್ಲಿಸಿ, ’ವೀರ ವಣಕ್ಕಂ’ನ ಘೋಷಗಳನ್ನು ಕೂಗುತ್ತಿರುವ ಕೊಯಮತ್ತೂರಿನ ಜನತೆ ದೇಶವಾಸಿಗಳ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ.
ನೋಡಿದವರ ಬಾಯಲ್ಲಿ ನೀರೂರಿಸುತ್ತೆ ಪಫ್ ಪೇಸ್ಟ್ರಿ ಪಿಜ್ಜಾ….!
ಮದ್ರಾಸ್ ರೆಜಿಮೆಂಟಲ್ ಕೇಂದ್ರದ ಸುಲೂರ್ ವಾಯುನೆಲೆಯತ್ತ ಹೊರಟಿದ್ದ ವಾಹನಗುಚ್ಛದಲ್ಲಿ ರಾವತ್ ಹಾಗೂ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಅವರೊಂದಿಗೆ ಮೃತಪಟ್ಟ ಅಧಿಕಾರಿಗಳ ದೇಹಗಳನ್ನು ಕೊಂಡೊಯ್ಯಲಾದ ಸಂದರ್ಭದಲ್ಲಿ ಈ ಭಾವಪೂರ್ಣ ವಿದಾಯವನ್ನು ಕೊಯಮತ್ತೂರಿನ ಮಂದಿ ನೀಡಿದ್ದಾರೆ.
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಒಂದು ನೀಲಗಿರಿ ಬೆಟ್ಟದ ಶ್ರೇಣಿಗಳ ಮೇಲೆ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿ, ರಾವತ್, ಅವರ ಮಡದಿ ಮಧುಲಿಕಾ ರಾವತ್ ಹಾಗೂ ಇತರೆ 11 ಮಂದಿ ಮೃತಪಟ್ಟಿದ್ದಾರೆ.