
ಕೊಲ್ಲಾಪುರ: ತೀರ್ಥಯಾತ್ರೆಗೆ ಬಂದವರು ಬಟ್ಟೆತೊಳೆಯಲೆಂದು ಹೋಗಿ ವೇದಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘ್ಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ ಬಸ್ತವಾಡೆ ಗ್ರಾಮದಲ್ಲಿ ನಡೆದಿದೆ.
ಮಹಿಳೆಯರು ಸೇರಿ ನಾಲ್ವವರು ನೀರುಪಾಲಾಗಿದ್ದು, ಮೃತರಲ್ಲಿ ಇಬ್ಬರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನವರಾಗಿದ್ದರೆ ಇನ್ನಿಬ್ಬರು ಮಹಾರಾಷ್ಟ್ರ ಮೂಲದವರು ಎಂದು ತಿಳಿದುಬಂದಿದೆ.
ರೇಷ್ಮಾ ದಿಲೀಪ್ ಯಳಮಲೆ (34) ಯಶ್ ದಿಲೀಪ್ ಯಳಮಲೆ (17), ಸವಿತಾ ಅಮರ ಕಾಂಬಳೆ (27), ಜಿತೇಂದ್ರ ಲೋಕುರೆ ಮ್ರಿತ ದುರ್ದೈವಿಗಳು. ಮ್ರಿತರಲ್ಲಿ ರೇಶ್ಮಾ ಹಾಗೂ ಯಶ್ ಬೆಳಗಾವಿಯ ಅಥಣಿಯವರು ಎಂದು ತಿಳಿದುಬಂದಿದೆ.
ಅನೂರು ಗ್ರಾಮಕ್ಕೆ ತೀರ್ಥಯಾತ್ರೆಗೆಂದು ಹೋಗಿದ್ದವರು ಅತಿಥಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಬಟ್ಟೆ ತೊಳೆಯಲೆಂದು ವೇದಗಂಗಾ ನದಿಗೆ ಇಳಿದಿದ್ದು, ಈ ವೇಳೆ ದುರಂತಕ್ಕೀಡಾಗಿದ್ದಾರೆ.