ಕೆಲವು ಮಂದಿ ಎಷ್ಟು ದುಡಿದರು ಸಹ ಹಣವನ್ನು ಉಳಿಸಲು ಸಾಧ್ಯವಾಗಲ್ಲ. ಹೀಗಾಗಿ ನೀವು ಸಹ ಹಣವನ್ನು ಉಳಿಸಲು ಸಾಧ್ಯವಾಗದಿದ್ದರೆ ಅಥವಾ ನಿರಂತರ ಆರ್ಥಿಕ ನಷ್ಟದಿಂದ ಬಳಲುತ್ತಿದ್ದರೆ, ನಿಮ್ಮ ವಾಸ್ತು ದೋಷವು ಇದಕ್ಕೆ ಒಂದು ಕಾರಣವಾಗಿರಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ಈಶಾನ್ಯ ದಿಕ್ಕು ಹಣದ ಆಗಮನದ ದಿಕ್ಕು ಮತ್ತು ಈ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇರಿಸಿದರೆ ಅಥವಾ ಈ ಸ್ಥಳದಲ್ಲಿ ಸಾಕಷ್ಟು ಕೊಳಕು ಇದ್ದರೆ, ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ಲಾಭ ಮತ್ತು ವ್ಯಾಪಾರ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಇದರ ಜೊತೆ ಈಶಾನ್ಯ ದಿಕ್ಕಿನಲ್ಲಿ ಸದಾ ಕತ್ತಲೆ ಇದ್ದರೆ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಅದಕ್ಕಾಗಿಯೇ ಈ ದಿಕ್ಕಿನಲ್ಲಿ ಯಾವಾಗಲೂ ಬೆಳಕು ಇರಬೇಕು. ಹಾಗೆಯೇ ದಕ್ಷಿಣ ದಿಕ್ಕನ್ನು ಯಮ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಬಾಗಿಲು ಅಥವಾ ಕಮಾನು ಇಡುವುದು ಹಣ ಮತ್ತು ಪ್ರಾಣಹಾನಿ ಎಂದು ಪರಿಗಣಿಸಲಾಗುತ್ತದೆ.
ನೀವು ಉದ್ಯಮ ನಡೆಸುವ ಜಾಗದಲ್ಲಿ ಚೆನ್ನಾಗಿ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಬೇಕು. ದೇವರ ಫೋಟೋಗಳನ್ನು ಇರಿಸಿದ ಸ್ಥಳದಲ್ಲಿ ಒಂದು ಲೋಟದಲ್ಲಿ ನೀರು ಹಾಕಿ ಅದರಲ್ಲಿ ನಿಂಬೆ ಹಣ್ಣನ್ನು ಹಾಕಿಡಿ. ಇದರಿಂದ ಕೆಟ್ಟ ಶಕ್ತಿಗಳು ನಿಮ್ಮತ್ತ ಸುಳಿಯುವುದಿಲ್ಲ.