ಮನೆಯಲ್ಲಿ ಊಟ ತಿಂಡಿಗಾಗಿ ಪ್ರತ್ಯೇಕ ಸ್ಥಳವಿದ್ದು, ವಾಸ್ತು ನಿಯಮಗಳನ್ನು ಅನುಸರಿಸಿದರೆ ಮನೆಮಂದಿಯೆಲ್ಲ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಇದಕ್ಕೆ ಇಲ್ಲಿದೆ ಒಂದಿಷ್ಟು ವಾಸ್ತು ಟಿಪ್ಸ್.
* ಪಶ್ಚಿಮ ಭಾಗದಲ್ಲಿ ಊಟದ ಪ್ರದೇಶ ಇರುವುದು ಅತ್ಯುತ್ತಮ. ಅದು ಬಿಟ್ಟರೆ ಉತ್ತರ ಅಥವಾ ಪೂರ್ವವನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.
* ಡೈನಿಂಗ್ ರೂಂ ಯಾವಾಗಲೂ ಸಾಕಷ್ಟು ವಿಶಾಲವಾಗಿರಬೇಕು. ಇಕ್ಕಟ್ಟಿನ ಜಾಗ ಬೇಡ.
* ಊಟ ಮಾಡುವಾಗ ಕುಟುಂಬದ ಮುಖ್ಯಸ್ಥರು ಪೂರ್ವಕ್ಕೆ ಮತ್ತು ಉಳಿದವರು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡುವಂತೆ ಇರಲಿ.
* ಡೈನಿಂಗ್ ಟೇಬಲ್ ನ ಆಗ್ನೇಯ ಮೂಲೆಯಲ್ಲಿ ಮಕ್ಕಳು ಕುಳಿತು ಊಟ ಮಾಡಬಾರದು. ತಪ್ಪಿದರೆ ಮಕ್ಕಳು ಹೆತ್ತವರ ಮಾತು ಕೇಳದೆ ಇರುವ ಸಾಧ್ಯತೆ ಇದೆ.
* ಊಟ ಮಾಡುವಾಗ ಕುಟುಂಬದ ಯಾವುದೇ ಸದಸ್ಯರು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬಾರದು.
* ಚೌಕ ಅಥವಾ ಆಯತಾಕಾರದ ಡೈನಿಂಗ್ ಟೇಬಲ್ ಅತ್ಯುತ್ತಮ. ವೃತ್ತಾಕಾರ, ಅಂಡಾಕಾರ ಅಥವಾ ಇನ್ಯಾವುದೇ ಆಕಾರದ ಟೇಬಲ್ ಬೇಡ.
* ಡೈನಿಂಗ್ ರೂಂನ ನೈರುತ್ಯ ಮೂಲೆಗೆ ಹೊಂದುವಂತೆ ಟೇಬಲ್ ಹಾಕಬೇಕು. ಆದರೆ ಟೇಬಲ್ ಗೋಡೆಗೆ ತಾಗುವಂತೆ ಇರಬಾರದು. ಕುಡಿಯುವ ನೀರು ಇಡಲು ಈಶಾನ್ಯ ಭಾಗವನ್ನು ಬಳಸಿಕೊಳ್ಳಿ.
* ಡೈನಿಂಗ್ ರೂಂ ಗೆ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಬಾಗಿಲು ಇರಲಿ. ಆದರೆ ದಕ್ಷಿಣ ದಿಕ್ಕಿನಲ್ಲಿ ಇರಲೇ ಬಾರದು.