ನೀವು ಮಲಗುವ ಮುನ್ನ ಅಥವಾ ಎದ್ದ ಬಳಿಕ ಅಥವಾ ಇನ್ನೆಲ್ಲಿಗೋ ಹೊರಡುವಾಗ, ಯಾರಿಗೋ ಕಾಯುತ್ತಿದ್ದಾಗ ಹೀಗೆ ಯಾವುದೇ ಸಂದರ್ಭ ಇರಲಿ ನೀವು ಸಮಯವನ್ನು ಆಗಾಗ ನೋಡುತ್ತಲೇ ಇರುತ್ತೀರಿ. ಮನೆ ಇರಲಿ ಅಥವಾ ಕಚೇರಿ ಇರಲಿ ಗಡಿಯಾರ ಇರಲೇಬೇಕು.
ಹೀಗಾಗಿ ಗಡಿಯಾರ ಕೂಡ ನಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗಲಾರದು. ಹೀಗಾಗಿ ಈ ಗಡಿಯಾರವೂ ಕೂಡ ಇಂತದ್ದೇ ದಿಕ್ಕಿನಲ್ಲಿ ಇರಬೇಕು ಎಂದು ಹೇಳುತ್ತೆ ವಾಸ್ತುಶಾಸ್ತ್ರ.
ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರವನ್ನು ಎಂದಿಗೂ ಪೂರ್ವ, ಪಶ್ಚಿಮ ಅಥವಾ ಉತ್ತರದ ಗೋಡೆಯಲ್ಲಿ ಇರಿಸಬೇಕು. ಈ ದಿಕ್ಕುಗಳು ಮನೆಗಿರಲಿ ಅಥವಾ ಕಚೇರಿಗೆ ಇರಲಿ ಸಕರಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ಗಡಿಯಾರವನ್ನು ಇಟ್ಟರೆ ನಿಮ್ಮ ಸಮಯ ಕೂಡ ಚೆನ್ನಾಗಿ ಇರಲಿದೆ. ಆದ್ದರಿಂದ ಇದೇ ದಿಕ್ಕಿನಲ್ಲಿಯೇ ಗಡಿಯಾರವನ್ನು ನೇತು ಹಾಕಿದರೆ ಒಳ್ಳೆಯದು ಎಂದು ವಾಸ್ತುಶಾಸ್ತ್ರ ಹೇಳಿದೆ. ಇದನ್ನು ಬಿಟ್ಟು ಬೇರೆ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಗಡಿಯಾರ ಇರಿಸಲೇಬೇಡಿ.