ನವರಾತ್ರಿ ಹಬ್ಬದ ಸಂಭ್ರಮ ಈಗಾಗಲೇ ಆರಂಭವಾಗಿದೆ. ಒಂಬತ್ತು ದಿನಗಳ ಕಾಲ ವಿವಿಧ ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಒಂದೊಂದು ದಿನವೂ ದೇವಿಯ ಒಂದೊಂದು ರೂಪವನ್ನು ಆರಾಧಿಸಲಾಗುತ್ತದೆ. ಪೂಜೆಗೆ ಕಲಶವನ್ನು ಸ್ಥಾಪನೆ ಮಾಡುವ ಮುನ್ನ ಅದರ ದಿಕ್ಕು ಕೂಡ ಮುಖ್ಯವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ಕಳಶವನ್ನು ಪ್ರತಿಷ್ಟಾಪನೆ ಮಾಡಬೇಕು ಅನ್ನೋದಕ್ಕೆ ಮಾಹಿತಿ ಇಲ್ಲಿದೆ ನೋಡಿ.
ಆಧಾರ್-ಪಾನ್ ಹೊಂದಿರುವವರು ಈಗ್ಲೇ ಮಾಡಿ ಈ ಕೆಲಸ
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕನ್ನು ದೇವತೆಗಳ ದಿಕ್ಕು ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವುದು ಹೆಚ್ಚು ಶುಭಕರವಾಗಿದೆ. ದೇವಿಯನ್ನು ಪ್ರತಿಷ್ಠಾಪಿಸಲು ಶ್ರೀಗಂಧದಿಂದ ಮಾಡಿದ ಪೀಠವನ್ನು ಇಡಬೇಕು.
ಶ್ರೀಗಂಧದ ಮರವು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಕೆಲವೊಂದು ವಾಸ್ತು ದೋಷಗಳನ್ನು ನಿವಾರಿಸುವ ಶಕ್ತಿ ಶ್ರೀಗಂಧಕ್ಕಿದೆ. ಆದರೆ ಪೀಠ ಸ್ಥಾಪನೆ ಮಾಡುವ ಜಾಗದ ಸಮೀಪ ಶೌಚಾಲಯ ಹಾಗೂ ಸ್ನಾನದ ಗೃಹ ಇಲ್ಲದಂತೆ ನೋಡಿಕೊಳ್ಳಬೇಕು.