ವಾಸ್ತು ಪ್ರಕಾರ , ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ. ಜೀವನದ ಯಶಸ್ಸು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿ, ಸಂಪತ್ತು ವೃದ್ಧಿ, ಅನಾರೋಗ್ಯ ಸೇರಿದಂತೆ ಎಲ್ಲದಕ್ಕೂ ಮನೆಯ ವಾಸ್ತು ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಬೀರುವನ್ನು ಕೂಡ ಸರಿಯಾದ ದಿಕ್ಕಿನಲ್ಲಿ ಇಡಬೇಕು. ಬೀರು ತಪ್ಪಾದ ಸ್ಥಳದಲ್ಲಿದ್ದರೆ ಹಣದ ಸಮಸ್ಯೆ ಎದುರಾಗುತ್ತದೆ.
ಮನೆಯಲ್ಲಿರುವ ಬೀರುವನ್ನು ನೀವು ಉತ್ತರ ದಿಕ್ಕಿಗೆ ಇಡಬಹುದು. ಇದು ಕುಬೇರನ ದಿಕ್ಕಾಗಿದೆ. ಉತ್ತರ ದಿಕ್ಕಿನಲ್ಲಿ ಹಣವಿಡುವ ಅಥವಾ ಬಂಗಾರವಿಡುವ ಬೀರುವನ್ನು ಇಟ್ಟರೆ ಸಂಪತ್ತು ಸುರಕ್ಷಿತವಾಗಿರುವ ಜೊತೆಗೆ ಸಂಪತ್ತಿನ ವೃದ್ಧಿಯಾಗುತ್ತದೆ.
ಮನೆಯ ಉತ್ತರ ದಿಕ್ಕಿಗೆ ಬೀರು ಇಡಲು ಸಾಧ್ಯವಿಲ್ಲ ಎನ್ನುವವರು ನೀವಾಗಿದ್ದರೆ ಮನೆಯ ಪೂರ್ವ ದಿಕ್ಕಿಗೂ ನೀವು ಬೀರುವನ್ನು ಇಡಬಹುದು. ಇದ್ರಿಂದ ಶುಭಕರ ಫಲಿತಾಂಶವನ್ನು ನೀವು ನೋಡಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಬೀರು ದಕ್ಷಿಣ ದಿಕ್ಕಿಗೆ ಬಾಗಿಲು ತೆರೆಯಬಾರದು. ನಂಬಿಕೆಗಳ ಪ್ರಕಾರ, ತಾಯಿ ಲಕ್ಷ್ಮಿ ದಕ್ಷಿಣ ದಿಕ್ಕಿನಿಂದ ಪ್ರಯಾಣಿಸುತ್ತಾಳೆ. ಅಲ್ಲಿಂದ ಅವಳು ಉತ್ತರಕ್ಕೆ ಬರುತ್ತಾಳೆ. ಹಾಗಾಗಿ ಈ ದಿಕ್ಕಿನಲ್ಲಿ ಬಾಗಿಲು ತೆರೆಯುವುದರಿಂದ ನಿಮ್ಮ ಮನೆಯಲ್ಲಿ ಹಣ ನಿಲ್ಲುವುದಿಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಹಣವಿರುವ ಬೀರುವನ್ನು ಈಶಾನ್ಯ, ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬಾರದು. ಇಲ್ಲಿ ಬೀರು ಇಡುವುದ್ರಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಮನೆ ಮಾಡುತ್ತದೆ. ಹಣದ ನಷ್ಟವುಂಟಾಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಒಂದಾದ ಮೇಲೆ ಒಂದು ಸಮಸ್ಯೆ ನಿಮ್ಮನ್ನು ಕಾಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.