
ಪಿತೃ ಪಕ್ಷ ಮುಗಿಯುತ್ತ ಬರ್ತಿದೆ. ಸೆಪ್ಟೆಂಬರ್ 25ಕ್ಕೆ ಪಿತೃ ಪಕ್ಷ ಮುಗಿಯಲಿದೆ. ಜನರು ಪೂರ್ವಜರ ಶ್ರಾದ್ಧ, ಪಿಂಡ ದಾನಕ್ಕೆ ಮಹತ್ವ ನೀಡುತ್ತಿದ್ದಾರೆ. ಪಿತೃ ಪಕ್ಷದಲ್ಲಿ ಮಾತ್ರವಲ್ಲ ಬಹುತೇಕರು ಮನೆಯಲ್ಲಿ ಪೂರ್ವಜರ ಫೋಟೋವನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲೆಂದರಲ್ಲಿ ಪಿತೃಗಳ ಫೋಟೋ ಇಡುವುದು ಸೂಕ್ತವಲ್ಲ. ಕೆಲ ಜಾಗದಲ್ಲಿ ಅಪ್ಪಿತಪ್ಪಿಯೂ ಪಿತೃಗಳ ಫೋಟೋವನ್ನು ಇಡಬಾರದು.
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಪೂರ್ವಜರ ಫೋಟೋವನ್ನು ಇಡಬಾರದು. ಹಾಗೆಯೇ ಅಡುಗೆ ಮನೆಯಲ್ಲಿ ಕೂಡ ಪೂರ್ವಜರ ಫೋಟೋವನ್ನು ಹಾಕಬಾರದು. ಇದ್ರಿಂದ ಪೂರ್ವಜರು ಕೋಪಗೊಳ್ಳುತ್ತಾರೆ. ಪಿತೃ ದೋಷವನ್ನು ಅನುಭವಿಸಬೇಕಾಗುತ್ತದೆ. ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿ ಇದ್ರಿಂದ ನಾಶವಾಗುತ್ತದೆ.
ಮನೆಯ ಮುಖ್ಯ ಬಾಗಿಲಿನಲ್ಲಿ ಕೂಡ ಪಿತೃಗಳ ಫೋಟೋವನ್ನು ಹಾಕಬಾರದು. ಮುಖ್ಯ ದ್ವಾರದಲ್ಲಿ ಪೂರ್ವಜರ ಫೋಟೋ ಹಾಕಿದ್ರೆ ಅದು ಎಲ್ಲರ ಗಮನ ಸೆಳೆಯುತ್ತದೆ. ಇದ್ರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಮನೆಯಲ್ಲಿ ಸದಾ ಗಲಾಟೆ, ಜಗಳವಾಗ್ತಿರುತ್ತದೆ.
ಪೂರ್ವಜರ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ಕೂಡ ಮುಖ್ಯವಾಗುತ್ತದೆ. ಪೂರ್ವಜರ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ದಕ್ಷಿಣ ದಿಕ್ಕು ಯಮರಾಜನದ್ದು ಎಂದು ಹೇಳಲಾಗುತ್ತದೆ. ಪೂರ್ವಜರು ಸ್ವರ್ಗಕ್ಕೆ ಹೋಗಬೇಕು ಅಂದ್ರೆ ಈ ದಿಕ್ಕಿನಲ್ಲಿ ಪಿತೃಗಳ ಫೋಟೋ ಇಡಬಾರದು.
ಪೂರ್ವಜರನ್ನು ಮೆಚ್ಚಿಸಿದ್ರೆ ಯಾವುದೇ ಸಮಸ್ಯೆ ಕಾಡುವುದಿಲ್ಲ ಎನ್ನಲಾಗುತ್ತದೆ. ನೀವು ಪೂರ್ವಜರ ಕೃಪೆ ಪಡೆಯಬೇಕು ಎಂದಾದ್ರೆ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಪ್ರತಿ ದಿನ ಮನೆಯ ಮುಖ್ಯ ದ್ವಾರಕ್ಕೆ ನೀರನ್ನು ಹಾಕಿ. ಹಾಗೆಯೇ ದಕ್ಷಿಣ ದಿಕ್ಕಿಗೆ ಪ್ರತಿನಿತ್ಯ ದೀಪವನ್ನು ಹಚ್ಚುಬೇಕು. ಇದ್ರಿಂದ ಪೂರ್ವಜರು ಖುಷಿಯಾಗಿ ನಿಮಗೆ ಆಶೀರ್ವಾದ ನೀಡುತ್ತಾರೆ.