ಭಗವಂತನ ಕೃಪೆಗಾಗಿ ಪ್ರತಿಯೊಂದು ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ. ಪ್ರತಿ ದಿನ ದೇವರಿಗೆ ಪೂಜೆ ಮಾಡಿ ಫಲ ಪ್ರಾಪ್ತಿಗೆ ಭಕ್ತರು ಪ್ರಾರ್ಥನೆ ಮಾಡ್ತಾರೆ. ಆದ್ರೆ ದೇವರ ಕೋಣೆ ಹಾಗೂ ದೇವರ ಪೂಜೆಗೂ ವಿಧಿ-ವಿಧಾನಗಳಿವೆ. ನಿಯಮ ತಪ್ಪಿ ದೇವರ ಕೋಣೆ ಹಾಗೂ ಪೂಜೆ ಮಾಡಿದ್ರೆ ದೇವರ ಕೃಪೆ ಪ್ರಾಪ್ತಿ ಬದಲು ಸಂಕಷ್ಟ ಎದುರಾಗುತ್ತದೆ.
ಮನೆ ಚಿಕ್ಕದು ಎನ್ನುವ ಕಾರಣಕ್ಕೆ ಅನೇಕರು ಮಲಗುವ ಕೋಣೆಯಲ್ಲಿ ದೇವರನ್ನಿಟ್ಟು ಪೂಜೆ ಮಾಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯಲ್ಲ. ಮಲಗುವ ಕೋಣೆಯಲ್ಲಿ ದೇವರನ್ನಿಡುವುದು ಸರಿಯಲ್ಲ. ಇದು ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ.
ಉಳ್ಳವರು ಮನೆಯಲ್ಲಿಯೇ ಮಂದಿರ ನಿರ್ಮಾಣ ಮಾಡ್ತಿದ್ದಾರೆ. ಇದು ಕೂಡ ಶುಭವಲ್ಲ. ದೇವರ ಮನೆ ಪ್ರತ್ಯೇಕವಿರಬೇಕು. ಆದ್ರೆ ದೇವರಿಗಾಗಿ ಮನೆಯಲ್ಲಿಯೇ ಮಂದಿರ ನಿರ್ಮಾಣ ಮಾಡಬಾರದು.
ರಜೆ ವೇಳೆ ಮನೆಗೆ ಬೀಗ ಹಾಕಿ ಹೋಗುತ್ತಾರೆ. ದೇವರ ಮನೆಗೂ ಬೀಗ ಹಾಕಿ ಹೋಗುವವರಿದ್ದಾರೆ. ದೇವರ ಕೋಣೆಯಲ್ಲಿರುವ ದೇವರಿಗೆ ನಿಯಮಿತವಾಗಿ ಪೂಜೆ ನಡೆಯಬೇಕು. ಸಾಧ್ಯವಾಗಿಲ್ಲವೆಂದ್ರೆ ಮನೆ ಬಾಗಿಲು ಹಾಕುವಾಗ ದೇವರ ಮನೆ ಬಾಗಿಲನ್ನು ಅಪ್ಪಿತಪ್ಪಿಯೂ ಹಾಕಬಾರದು.
ದೇವರ ಮನೆಯಲ್ಲಿ ಹಳೆಯ ಹೂವು, ಮಾಲೆ, ಅಗರಬತ್ತಿಯನ್ನು ಇಡಬಾರದು. ಇದ್ರಿಂದ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.
ದೇವರ ಮನೆ ಗೋಡೆ ಅಡುಗೆ ಮನೆ ಗೋಡೆ ಹಾಗೂ ಶೌಚಾಲಯದ ಗೋಡೆಗೆ ಅಂಟಿಕೊಂಡಿರಬಾರದು. ಅಡುಗೆ ಮನೆಯಲ್ಲಿಯೂ ದೇವರ ಮನೆಯಿರಬಾರದು.