
ವಾಸ್ತುಶಾಸ್ತ್ರ ಎನ್ನುವುದು ಕೇವಲ ಮನೆಯ ದೇವರ ಕೋಣೆ ಅಥವಾ ಅಡುಗೆ ಮನೆಗೆ ಮಾತ್ರ ಸೀಮಿತವಾದ್ದದಲ್ಲ. ಇದು ಸ್ನಾನಗೃಹದಲ್ಲಿಯೂ ಇರುತ್ತದೆ. ಈಗಿನ ಜಮಾನದಲ್ಲಿ ಸ್ನಾನಗೃಹ ಹಾಗೂ ಶೌಚಾಲಯಗಳನ್ನೂ ಆಕರ್ಷಕವಾಗಿ ನಿರ್ಮಿಸಬೇಕು ಎಂಬ ಪ್ಲಾನ್ ಹಲವರದ್ದು. ಹೀಗಾಗಿ ಪ್ರತಿಯೊಂದು ಕೋಣೆಗೂ ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನಗೃಹಗಳನ್ನು ನಿರ್ಮಿಸಲಾಗುತ್ತದೆ.
ಆದರೆ ವಾಸ್ತು ಶಾಸ್ತ್ರದಲ್ಲಿ ಕೋಣೆಗಳಿಗೆ ಸ್ನಾನ ಗೃಹ ಹಾಗೂ ಶೌಚಾಲಯಗಳನ್ನು ನಿರ್ಮಿಸುವುದು ಶುಭಕರವಲ್ಲ ಎಂದು ಪರಿಗಣಿಸಲಾಗಿದೆ.
ಬಿಳಿ, ಗುಲಾಬಿ, ತಿಳಿ ಹಳದಿ ಅಥವಾ ತಿಳಿ ನೀಲಿ ಬಣ್ಣವು ಶೌಚಾಲಯ ಹಾಗೂ ಸ್ನಾನಗೃಹದ ಗೋಡೆಗಳಿಗೆ ಸೂಕ್ತ ಬಣ್ಣವಾಗಿದೆ. ಈ ಬಣ್ಣಗಳು ಶಾಂತಿಯನ್ನು ಸೂಚಿಸುತ್ತವೆ. ಇನ್ನು ಸ್ನಾನಗೃಹದ ಟೈಲ್ಸ್ಗಳ ಬಗ್ಗೆ ಮಾತನಾಡುವುದಾದರೆ ಇಲ್ಲೂ ಕೂಡ ಎಂದಿಗೂ ತಿಳಿಯಾದ ಬಣ್ಣಗಳನ್ನೇ ಆಯ್ಕೆ ಮಾಡಿ. ಎಂದಿಗೂ ಗಾಢ ಬಣ್ಣದ ಟೈಲ್ಸ್ಗಳನ್ನು ಬಳಕೆ ಮಾಡಲೇಬೇಡಿ. ಬಿಳಿ, ತಿಳಿ ನೀಲಿ ಅಥವಾ ಆಕಾಶ ಬಣ್ಣವು ನಿಮ್ಮ ಆಯ್ಕೆಯಾಗಿರಲಿ. ಕಪ್ಪು ಅಥವಾ ಕೆಂಪು ಬಣ್ಣದ ಟೈಲ್ಸ್ಗಳು ಸೂಕ್ತವಲ್ಲ.
ಅಲ್ಲದೇ ಸ್ನಾನಗೃಹದ ಬಕೆಟ್ಗಳನ್ನೂ ನೀವು ಸೂಕ್ತವಾಗಿ ಆಯ್ಕೆ ಮಾಡಬೇಕು. ಸ್ನಾನಗೃಹದಲ್ಲಿ ನೀಲಿ ಬಣ್ಣದ ಬಕೆಟ್ನ್ನು ಇಡಿ. ಇದು ವಾಸ್ತು ದೃಷ್ಟಿಯಿಂದ ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗಿದೆ.