ವಾಸ್ತು ಶಾಸ್ತ್ರದಲ್ಲಿ, ಸ್ನಾನಗೃಹದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಸ್ನಾನ ಗೃಹದಲ್ಲಿ ಕೆಲವೊಂದು ವಸ್ತುಗಳನ್ನಿಟ್ಟರೆ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಕೆಲವರು ಬಾತ್ ರೂಮಿನಲ್ಲಿ ಗಿಡಗಳನ್ನು ಇಡ್ತಾರೆ. ವಾಸ್ತು ಪ್ರಕಾರ, ಕೆಲ ಗಿಡಗಳನ್ನು ಅಪ್ಪಿತಪ್ಪಿಯೂ ಬಾತ್ ರೂಮಿನಲ್ಲಿ ಇಡಬಾರದು. ಇದ್ರಿಂದ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ದುರಾದೃಷ್ಟ ನಿಮ್ಮನ್ನು ಆವರಿಸುತ್ತದೆ.
ಮನಿ ಪ್ಲಾಂಟ್ : ಮನಿ ಪ್ಲಾಂಟ್ ಸಸ್ಯವನ್ನು ಎಲ್ಲಿ ಬೇಕಾದರೂ ಸುಲಭವಾಗಿ ನೆಡಬಹುದು. ಅದೇ ಕಾರಣಕ್ಕೆ ಕೆಲವರು ಸ್ನಾನ ಗೃಹದಲ್ಲೂ ಅದನ್ನು ಬೆಳೆಸುತ್ತಾರೆ. ಆದ್ರೆ ವಾಸ್ತು ಪ್ರಕಾರ, ಮನಿ ಪ್ಲಾಂಟನ್ನು ಬಾತ್ ರೂಮಿನಲ್ಲಿ ಬೆಳೆಸಬಾರದು. ಮನಿ ಪ್ಲಾಂಟ್ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಅದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಬಾತ್ ರೂಂನಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ.
ಜೇಡ್ ಸಸ್ಯ : ಜೇಡ್ ಸಸ್ಯವನ್ನು ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಅದೃಷ್ಟದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವನ್ನು ಮನೆಯ ಮುಖ್ಯ ದ್ವಾರದಲ್ಲಿ, ಬಾಲ್ಕನಿಯಲ್ಲಿ ಅಥವಾ ಅಂಗಳದಲ್ಲಿ ಎಲ್ಲಿ ಬೇಕಾದರೂ ನೆಡಬಹುದು. ಆದರೆ ಬಾತ್ ರೂಂನಲ್ಲಿ ಜೇಡ್ ಗಿಡ ನೆಡುವುದನ್ನು ತಪ್ಪಿಸಬೇಕು. ಇದ್ರಿಂದ ವಾಸ್ತುದೋಷ ಉಂಟಾಗುತ್ತದೆ.
ಬೋನ್ಸಾಯ್ ಗಿಡ : ಬೋನ್ಸಾಯ್ ಗಿಡವನ್ನು ಬಾತ್ ರೂಂನಲ್ಲಿ ಮಾತ್ರವಲ್ಲ ಮನೆಯ ಅಲಂಕಾರಕ್ಕಾಗಿ ಕೂಡ ಈ ಸಸ್ಯವನ್ನು ಎಂದಿಗೂ ಬಳಸಬೇಡಿ. ಇದರಿಂದ ಹಣದ ಕೊರತೆ ಉಂಟಾಗುತ್ತದೆ. ಜೀವನದಲ್ಲಿ ಅನೇಕ ಸಮಸ್ಯೆ ಎದುರಾಗುತ್ತದೆ.