ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮ ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಅನೇಕ ಬಾರಿ ಮುಂದೊಂದು ದಿನ ಇದು ಉಪಯೋಗಕ್ಕೆ ಬರುತ್ತೆ ಎಂಬ ಕಾರಣ ನೀಡಿ ಹಾಳಾದ, ಹಳೆಯ ವಸ್ತುಗಳನ್ನು ಕೂಡ ನಾವು ಮನೆಯಲ್ಲಿ ಇಟ್ಟುಕೊಳ್ತೆವೆ. ಆದ್ರೆ ಮನೆಯಲ್ಲಿರುವ ಈ ವಸ್ತುಗಳು ನಮ್ಮ ಅದೃಷ್ಟದ ಬಾಗಿಲು ಮುಚ್ಚುತ್ತವೆ ಎಂಬುದು ನಮಗೆ ತಿಳಿಯೋದಿಲ್ಲ. ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮ ಸಾಲವನ್ನು ಹೆಚ್ಚು ಮಾಡುತ್ತವೆ. ಎಷ್ಟು ದುಡಿದ್ರೂ ಹಣ ಸಾಕಾಗೋದಿಲ್ಲ. ತಿಂಗಳ ಕೊನೆಯಲ್ಲಿ ಸಾಲ ಮಾಡೋದು ತಪ್ಪೋದಿಲ್ಲ. ಸಾಲದಿಂದ ಮುಕ್ತಿ ಸಿಗಬೇಕು ಅಂದ್ರೆ ಮನೆಯಲ್ಲಿರುವ ವಸ್ತುಗಳನ್ನು ಈಗ್ಲೇ ಹೊರಗೆ ಹಾಕಿ.
ನಿಮ್ಮ ಮನೆಯಲ್ಲಿ ಒಡೆದ ಗ್ಲಾಸಿನ ಕಪ್ ಅಥವಾ ಒಡೆದ ಕನ್ನಡಿಯಿದ್ದರೆ ಇಲ್ಲವೆ ಒಡೆದ ಯಾವುದೇ ಗ್ಲಾಸಿನ ವಸ್ತುವಿದ್ದರೂ ಅದನ್ನು ಮನೆಯಿಂದ ಹೊರಗೆ ಹಾಕಿ. ಇವು ಮನೆಯ ವಾಸ್ತು ದೋಷಕ್ಕೆ ಕಾರಣವಾಗುತ್ತವೆ.
ಮನೆಯಲ್ಲಿ ಹಾಳಾದ ಅಥವಾ ಬಂದ್ ಆದ ಇಲೆಕ್ಟ್ರಿಕ್ ವಸ್ತುಗಳಿದ್ದರೆ ಅದನ್ನು ಕೂಡ ಕಸಕ್ಕೆ ಹಾಕಿ. ಇವು ಕೂಡ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಲೆಯಾದ, ಹಳೆಯ ಹಾಗೂ ಹಾಳಾದ ಪಾತ್ರೆಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲ. ತೂತಾದ ಪಾತ್ರೆಗಳು ಅಥವಾ ಹಾಳಾದ ಪಾತ್ರೆಗಳು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಈ ಪಾತ್ರೆಗಳು ಮನೆಯಲ್ಲಿ ವಾಸ್ತು ದೋಷವನ್ನುಂಟು ಮಾಡುತ್ತದೆ.
ಮನೆಯಲ್ಲಿ ಜಿಪ್ ಹಾಳಾದ ಅಥವಾ ಹರಿದ ಪರ್ಸ್ ಅಥವಾ ಬ್ಯಾಗ್ ಇದ್ದರೆ, ಇಲ್ಲವೆ ಹಳೆಯ,ತುಕ್ಕು ಹಿಡಿದ ಕಪಾಟುಗಳಿದ್ದರೆ ಅದನ್ನು ಕೂಡ ಮನೆಯಿಂದ ಹೊರಗೆ ಹಾಕುವುದು ಸೂಕ್ತ. ಇವು ಕೂಡ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗುತ್ತವೆ.
ಪೂರ್ವಜರು ಅಥವಾ ಹಿರಿಯರ ಫೋಟೋಗಳು ಮನೆಯಲ್ಲಿರುತ್ತವೆ. ಒಂದ್ಕಡೆ ಬಣ್ಣ ಮಾಸಿರುತ್ತದೆ. ಇಲ್ಲವೆ ಗ್ಲಾಸ್ ಒಡೆದಿರುತ್ತದೆ. ಅಂಥ ಫೋಟೋಗಳನ್ನು ಕೂಡ ನೀವು ಮನೆಯಲ್ಲಿ ಇಡಬೇಡಿ.