ಅಡುಗೆ ಮನೆಯು ಮನೆಯ ಬಹುಮುಖ್ಯ ಭಾಗ. ಹಾಗಾಗಿ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆಲವು ವಸ್ತುಗಳು ಅಡುಗೆ ಮನೆಯಲ್ಲಿ ಸಂಪೂರ್ಣವಾಗಿ ಖಾಲಿಯಾಗಿರಬಾರದು. ಖಾಲಿಯಾದ್ರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುವುದಿಲ್ಲ. ಆರ್ಥಿಕ ನಷ್ಟ ಉಂಟಾಗುತ್ತದೆ.
ಭಾರತೀಯರು ಅತಿ ಹೆಚ್ಚು ಬಳಸುವ ಆಹಾರ ಅಕ್ಕಿ. ಬಹುತೇಕರ ಮನೆಯಲ್ಲಿ ಅಕ್ಕಿಯನ್ನು ಪ್ರತಿ ದಿನ ಬಳಸಲಾಗುತ್ತದೆ. ಅಡುಗೆ ಮನೆಯಲ್ಲಿ ಯಾವಾಗ್ಲೂ ಅಕ್ಕಿ ಇರಬೇಕು. ಅಕ್ಕಿ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಅಕ್ಕಿ ಖಾಲಿಯಾದ್ರೆ ಶುಕ್ರ ದೋಷ ಎದುರಾಗುತ್ತದೆ. ಭೌತಿಕ ಸೌಕರ್ಯ ಮತ್ತು ಐಶ್ವರ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.
ಅರಿಶಿನವು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಮುಖ್ಯ ಮಸಾಲೆಯಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಅರಿಶಿನ ಇರುವಂತೆ ನೋಡಿಕೊಳ್ಳಿ. ಇದು ಸಂಪೂರ್ಣ ಖಾಲಿಯಾದ್ರೆ ಗುರುದೋಷವನ್ನು ಎದುರಾಗುತ್ತದೆ. ಆರ್ಥಿಕ ಸ್ಥಿತಿ ಹದಗೆಡುತ್ತದೆ. ಹಾಗೇ ಅರಿಶಿನವನ್ನು ಎರವಲು ಪಡೆಯಬಾರದು.
ಮನೆಯ ಪಾತ್ರೆಯಲ್ಲಿ ಹಿಟ್ಟು ಖಾಲಿಯಾಗದಂತೆ ನೋಡಿಕೊಳ್ಳಿ. ಅನೇಕರು ಹಿಟ್ಟು ಖಾಲಿಯಾದ್ಮೇಲೆ ಹೊಸ ಹಿಟ್ಟನ್ನು ಮನೆಗೆ ತರ್ತಾರೆ. ಆದ್ರೆ ಹಾಗೆ ಮಾಡಬೇಡಿ. ಹಿಟ್ಟಿನ ಪಾತ್ರೆ ಖಾಲಿಯಾದ್ರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.