ಮನೆಯ ವಾಸ್ತು, ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ, ನಮ್ಮ ಆರ್ಥಿಕ ಸ್ಥಿತಿ ಸೇರಿದಂತೆ ಪ್ರತಿಯೊಂದರ ಮೇಲೂ ವಾಸ್ತು ಪ್ರಭಾವವಿರುತ್ತದೆ. ಫೆಂಗ್ ಶೂಯಿ ಶಾಸ್ತ್ರದಲ್ಲಿ ಸುಖ ಜೀವನಕ್ಕೆ ಏನು ಮಾಡ್ಬೇಕು ಎಂಬುದನ್ನು ಹೇಳಲಾಗಿದೆ. ಮನೆ ಮತ್ತು ಕಚೇರಿಯಲ್ಲಿ ಒಂಟೆಯ ಪ್ರತಿಮೆಯನ್ನು ಇಡುವುದು ಮಂಗಳಕರವೆಂದು ಹೇಳಲಾಗುತ್ತದೆ. ಒಂಟೆಯ ವಿಗ್ರಹ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂಟೆ ಧೈರ್ಯವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಒಂಟೆಯ ವಿಗ್ರಹವನ್ನು ಇಟ್ಟರೆ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಮನೆಗೆ ಒಂಟೆ ವಿಗ್ರಹ ತರುವುದು ಮುಖ್ಯವಲ್ಲ. ಅದನ್ನು ಎಲ್ಲಿಡಬೇಕು ಎಂಬುದು ಬಹಳ ಮುಖ್ಯವಾಗುತ್ತದೆ. ಒಂಟೆಯ ವಿಗ್ರಹವನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಇದ್ರಿಂದ ವಿದ್ಯಾಭ್ಯಾಸ, ವೃತ್ತಿ ಜೀವನದಲ್ಲಿ ಜನರು ಯಶಸ್ಸು ಗಳಿಸುತ್ತಾರೆ.
ಮನೆಯಲ್ಲಿ ಒಂಟೆ ಪ್ರತಿಮೆ ಇಡುವುದ್ರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಧನಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ. ಸದಾ ಯಶಸ್ಸು, ಗೌರವ, ಧನ ಪ್ರಾಪ್ತಿಯಾಗಬೇಕು ಅಂದ್ರೆ ನೀವು ಅದನ್ನು ಮನೆಯಲ್ಲಿ ಮಾತ್ರವಲ್ಲ ನಿಮ್ಮ ಕಚೇರಿಯಲ್ಲಿ, ಅಂಗಡಿ ಸ್ಥಳದಲ್ಲಿ ಕೂಡ ಇಡಬಹುದು. ಮನೆಯಲ್ಲಿ ಒಂಟೆ ಪ್ರತಿಮೆಯಿದ್ರೆ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲವೆಂದು ಫೆಂಗ್ ಶೂಯಿಯಲ್ಲಿ ಹೇಳಲಾಗಿದೆ. ಒತ್ತಡದಿಂದ ಬಳಲುವ ಜನರು ಮನೆಗೆ ಅವಶ್ಯವಾಗಿ ಒಂಟೆ ಮೂರ್ತಿಯನ್ನು ತರಬೇಕು. ಪದೇ ಪದೇ ಕೆಲಸದಲ್ಲಿ ಅಸಫಲತೆ ಸಿಗ್ತಿದೆ ಎನ್ನುವವರು ಕೂಡ ಒಂಟೆ ಮೂರ್ತಿ ಇಡುವ ಉಪಾಯವನ್ನು ಅನುಸರಿಸಬಹುದು.