ನಮ್ಮ ಜೀವನದ ಸಂತೋಷ, ನೆಮ್ಮದಿಗಾಗಿ ವಾಸ್ತು ಶಾಸ್ತ್ರವನ್ನು ಪಾಲಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ನಮ್ಮ ಜೀವನದ ಮೇಲೆ ಬಹಳ ಆಳವಾದ ಪ್ರಭಾವ ಬೀರುತ್ತದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು, ಅದರ ಬಣ್ಣ, ಅದನ್ನು ಖರೀದಿ ಮಾಡಿದ ದಿನಾಂಕ, ಸಮಯ ಎಲ್ಲವೂ ನಮ್ಮ ಜೀವನದ ನಕಾರಾತ್ಮಕ ಇಲ್ಲವೆ ಸಕಾರಾತ್ಮಕ ಪ್ರಭಾವಕ್ಕೆ ಕಾರಣವಾಗುತ್ತದೆ.
ಅಡುಗೆ ಮನೆ, ಮನೆಯ ಮುಖ್ಯ ಜಾಗಗಳಲ್ಲಿ ಒಂದು. ಅಲ್ಲಿ ಸ್ವಚ್ಛತೆ, ಆಹಾರ ವಸ್ತುಗಳಿರುವ ಡಬ್ಬ ಹಾಗೆಯೇ ಗ್ಯಾಸ್ ಒಲೆ ಇಡುವ ಜಾಗ ಕೂಡ ಮಹತ್ವ ಪಡೆಯುತ್ತದೆ. ಮನೆಯ ಯಾವ ಮೂಲೆಯನ್ನು ಗ್ಯಾಸ್ ಒಲೆ ಇಡಬೇಕು ಎನ್ನುವ ಬಗ್ಗೆ ಅನೇಕರಿಗೆ ಗೊತ್ತಿದೆ. ಆಗ್ನೇಯ ದಿಕ್ಕನ್ನು ಗ್ಯಾಸ್ ಒಲೆ ಇಡಲು ಉತ್ತಮ ದಿಕ್ಕೆಂದು ನಂಬಲಾಗಿದೆ. ಹಾಗೆಯೇ – ವಾಯುವ್ಯ ದಿಕ್ಕಿನಲ್ಲೂ ನೀವು ಗ್ಯಾಸ್ ಒಲೆ ಇಡಬಹುದು. ಆದ್ರೆ ಯಾವ ದಿನ ಗ್ಯಾಸ್ ಒಲೆ ಖರೀದಿ ಮಾಡ್ಬೇಕು ಹಾಗೆ ಎಂದು ಮಾಡಬಾರದು ಎಂಬುದು ಗೊತ್ತಾ?
ಗ್ಯಾಸ್ ಒಲೆ ಈ ದಿನ ಖರೀದಿ ಮಾಡಿ : ಹಿಂದೂ ಧರ್ಮದಲ್ಲಿ ಧನ ತ್ರಯೋದಶಿ ದಿನವನ್ನು ಗ್ಯಾಸ್ ಒಲೆ ಖರೀದಿಸಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಗುರುವಾರ ಕೂಡ ನೀವು ಗ್ಯಾಸ್ ಒಲೆ ಖರೀದಿಸಬಹುದು. ಇದ್ರಿಂದ ಮಂಗಳವಾಗುತ್ತದೆ.
ಈ ದಿನ ಗ್ಯಾಸ್ ಒಲೆ ಖರೀದಿಸಬೇಡಿ : ನೀವು ಅಪ್ಪಿತಪ್ಪಿಯೂ ಬುಧವಾರದಂದು ಗ್ಯಾಸ್ ಒಲೆ ಖರೀದಿಸಬೇಡಿ. ಬುಧವಾರ ಗ್ಯಾಸ್ ಒಲೆ ಮಾತ್ರವಲ್ಲದೆ ಬೆಂಕಿಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಖರೀದಿ ಮಾಡೋದು ಸೂಕ್ತವಲ್ಲ. ನೀವು ಶನಿವಾರ ಕೂಡ ಗ್ಯಾಸ್ ಒಲೆ ಖರೀದಿಗೆ ಹೋಗ್ಬೇಡಿ. ಶನಿವಾರ ಗ್ಯಾಸ್ ಒಲೆ ಖರೀದಿ ಮಾಡಿದ್ರೆ ಕುಟುಂಬದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.