ಹೋಟೆಲ್ಗಳಲ್ಲಿ ಕ್ಯಾಶಿಯರ್ ವಿಭಾಗ ಅನ್ನೋದು ಇದ್ದೇ ಇರುತ್ತೆ. ಇದನ್ನ ಹೋಟೆಲ್ನ ವಿನ್ಯಾಸಕ್ಕೆ ತಕ್ಕಂತೆ ಜಾಗವನ್ನ ಫಿಕ್ಸ್ ಮಾಡಲಾಗುತ್ತೆ. ಆದರೆ ಕ್ಯಾಶ್ ಕೌಂಟರ್ನ್ನ ಸರಿಯಾದ ದಿಕ್ಕಿನಲ್ಲಿ ಇರಿಸಿದ್ರೆ ಮಾತ್ರ ಹೋಟೆಲ್ನಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎನ್ನುತ್ತೆ ವಾಸ್ತು ಶಾಸ್ತ್ರ.
ಕ್ಯಾಶ್ ಕೌಂಟರ್ನಲ್ಲಿ ಕ್ಯಾಶಿಯರ್ ಆಗಿ ಕುಳಿತ ವ್ಯಕ್ತಿ ಎಂದಿಗೂ ತನ್ನ ಬಲ ಭಾಗದಲ್ಲೇ ಕ್ಯಾಶ್ ಬಾಕ್ಸ್ನ್ನ ಇಡಬೇಕು ಹಾಗೂ ಈ ಕ್ಯಾಶ್ ಬಾಕ್ಸ್ನ ಬಾಗಿಲು ಉತ್ತರ ದಿಕ್ಕಿನತ್ತ ತೆರೆಯುವಂತೆ ಇರಬೇಕು. ಈ ರೀತಿಯ ವಾಸ್ತುವಿನಿಂದ ನಿಮ್ಮ ಹೋಟೆಲ್ನಲ್ಲಿ ಲಾಭವಾಗುತ್ತೆ.
ಹೋಟೆಲ್ನಲ್ಲಿ ವಿದ್ಯುತ್ ಸಂಪರ್ಕ ನೀಡುವಾಗಲೂ ವಾಸ್ತು ಶಾಸ್ತ್ರವನ್ನ ಮರೆಯುವಂತಿಲ್ಲ. ಹೋಟೆಲ್ನ ಎಲೆಕ್ಟ್ರಿಕ್ ಮೀಟರ್ನ್ನ ನೈಋತ್ಯ ದಿಕ್ಕಿನಲ್ಲಿ ಅಳವಡಿಸೋದು ಉತ್ತಮ. ದಕ್ಷಿಣ ಹಾಗೂ ಈಶಾನ್ಯ ಭಾಗದಲ್ಲಿ ಎಲೆಕ್ಟ್ರಿಕ್ ಮೀಟರ್ ಅಳವಡಿಸದಿರಿ. ಜನರೇಟರ್ ಹಾಗೂ ಟ್ರಾನ್ಸ್ಫಾರ್ಮರ್ಗಳಿಗೆ ಅಗ್ನಿ ಮೂಲೆಯನ್ನ ಆಯ್ಕೆ ಮಾಡಿ.