alex Certify ‘ದೀಪಾವಳಿ’ ಯಲ್ಲಿ ದೀಪ ಬೆಳಗುವ ಮೊದಲು ಈ ವಿಷಯ ತಿಳಿದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೀಪಾವಳಿ’ ಯಲ್ಲಿ ದೀಪ ಬೆಳಗುವ ಮೊದಲು ಈ ವಿಷಯ ತಿಳಿದಿರಿ

ಕಾರ್ತಿಕ ಮಾಸದ ಅಮವಾಸ್ಯೆಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಐದು ದಿನಗಳ ಕಾಲ ನಡೆಯುವ ಹಿಂದುಗಳ ದೊಡ್ಡ ಹಬ್ಬ. 14 ವರ್ಷಗಳ ವನವಾಸ ಮುಗಿಸಿ ರಾಮ ಅಯೋಧ್ಯೆಗೆ ಬಂದ ದಿನವಿದು ಎನ್ನಲಾಗುತ್ತದೆ.

ಇದೇ ಕಾರಣಕ್ಕೆ ಜನರೆಲ್ಲ ಅಯೋಧ್ಯೆ ಸುತ್ತ ದೀಪ ಬೆಳಗಿದ್ದರಂತೆ. ಆ ಖುಷಿಯನ್ನು ಈಗ್ಲೂ ಆಚರಿಸಲಾಗುತ್ತದೆ. ದೇಶದೆಲ್ಲೆಡೆ ದೀಪ ಬೆಳಗಿ ದೀಪಾವಳಿ ಆಚರಣೆ ಮಾಡಲಾಗುತ್ತದೆ.

ದೀಪಾವಳಿಯಂದು ತಾಯಿ ಲಕ್ಷ್ಮಿ ಹಾಗೂ ಗಣಪತಿ ಪೂಜೆ ನಡೆಯುತ್ತದೆ. ಈ ದಿನ ಮನೆ ಮನೆಯಲ್ಲಿ ದೀಪ ಹಚ್ಚಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ದೀಪ ಹಚ್ಚುವ ಮೊದಲು ಕೆಲ ಸಂಗತಿಯನ್ನು ತಿಳಿದಿರಬೇಕು.

ನೀವು ಮನೆ ಸುತ್ತ ಅಥವಾ ಮನೆಯ ಹೊರ ಭಾಗದಲ್ಲಿ ದೀಪ ಹಚ್ಚುವ ಮೊದಲು ದೇವರ ಮನೆಯಲ್ಲಿ ದೀಪ ಬೆಳಗಬೇಕು. ದೇವರ ಮನೆಯಲ್ಲಿ   ದೀಪ ಹಚ್ಚಿದ ನಂತ್ರವೇ ನೀವು ಮನೆಯ ಬೇರೆ ಸ್ಥಳಗಳಲ್ಲಿ ದೀಪ ಹಚ್ಚಿದ್ರೆ ಒಳ್ಳೆಯದು.

ದೀಪ ಹಚ್ಚುವ ವೇಳೆ ವರ್ತಿ ಬಗ್ಗೆಯೂ ಗಮನವಿರಲಿ. ಸುತ್ತಿದ ವರ್ತಿಯನ್ನು ಬಳಸಬೇಡಿ. ಉದ್ದದ ವರ್ತಿ ಬಳಸಿ. ಹಾಗೆಯೇ ಎಣ್ಣೆಯಲ್ಲಿಯೇ ದೀಪವನ್ನು ಹಚ್ಚಿ.

ನೀವು ದೀಪ ಹಚ್ಚಿಡುವ ಬಟ್ಟಲಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣವನ್ನು ಇಡಿ. ಇದ್ರಿಂದ ತಾಯಿ ಲಕ್ಷ್ಮಿ ಖುಷಿಯಾಗ್ತಾಳೆ. ನೀವು ಬಯಸಿದ್ದನ್ನೆಲ್ಲ ನೀಡ್ತಾಳೆ.

ದೇವರ ಮನೆಯಲ್ಲಿ ದೀಪ ಹಚ್ಚಿದ ನಂತ್ರ ನೀವು ತುಳಸಿ ಗಿಡಕ್ಕೆ ದೀಪ ಬೆಳಗಬೇಕು. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ತುಳಸಿಗೆ ದೀಪ ಬೆಳಗಿದ್ರೆ ಎಲ್ಲ ಸಮಸ್ಯೆ ದೂರವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...