ಮನೆಯ ಕೋಣೆಗಳಿಂದ ಅಡುಗೆಮನೆ ಮತ್ತು ಸ್ನಾನಗೃಹದವರೆಗೆ ಸರಿಯಾಗಿ ವಾಸ್ತುವನ್ನು ಪಾಲಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅವುಗಳನ್ನು ಸರಿಯಾಗಿ ಪಾಲಿಸದಿದ್ದರೆ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ.
ನಕಾರಾತ್ಮಕ ಶಕ್ತಿಯಿಂದ ವ್ಯಕ್ತಿಯು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಸ್ನಾನಗೃಹದ ವಾಸ್ತು ಕೂಡ ಸೇರಿದೆ. ಇದಕ್ಕೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳ ಬಗ್ಗೆ ನೀವು ತಿಳಿದಿರಲೇಬೇಕು.
ವಾಸ್ತವವಾಗಿ, ಬಾತ್ರೂಮ್ನಲ್ಲಿ ಇರಿಸಲಾದ ಕೆಲವು ವಸ್ತುಗಳು ವಾಸ್ತು ದೋಷಗಳನ್ನು ಉಂಟುಮಾಡುತ್ತವೆ. ಹೀಗಾಗಿ ನೀವು ಸ್ನಾನಗೃಹದಲ್ಲಿ ಈ ವಸ್ತುಗಳನ್ನು ಇಡದಿರುವುದು ಒಳಿತು. ಸ್ನಾನಗೃಹದಲ್ಲಿ ಯಾವೆಲ್ಲಾ ವಸ್ತುಗಳನ್ನು ಇಡಬಾರದು ಎಂಬುದು ಇಲ್ಲಿದೆ..
ಮುರಿದ ಗಾಜು:
ಒಡೆದ ಗಾಜು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ನೀವು ಮನೆಯಲ್ಲಿ ಅಥವಾ ಬಾತ್ರೂಮ್ನಲ್ಲಿ ಒಡೆದ ಗಾಜನ್ನು ಹಾಕಬಾರದು. ನೀವು ಅದನ್ನು ಇಟ್ಟರೆ, ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
ಉದುರಿರುವ ತಲೆಗೂದಲು:
ಸಾಮಾನ್ಯವಾಗಿ ಮಹಿಳೆಯರು ತಲೆಗೆ ಸ್ನಾನ ಮಾಡಿದ ನಂತರ ಬಾತ್ರೂಮ್ನಲ್ಲಿ ಉದುರಿರುವ ಕೂದಲನ್ನು ಹಾಗೇ ಬಿಡುತ್ತಾರೆ. ಇದು ಒಳ್ಳೆಯದಲ್ಲ. ಬಾತ್ರೂಮ್ನಲ್ಲಿ ಕೂದಲು ಉದುರಿ ಹೋಗುವುದು ವಾಸ್ತು ದೃಷ್ಟಿಯಿಂದ ಅಶುಭ ಎಂದು ಪರಿಗಣಿಸಲಾಗಿದೆ.
ತಾಮ್ರದ ವಸ್ತು:
ತಾಮ್ರದ ವಸ್ತುಗಳನ್ನು ಸಹ ಸ್ನಾನಗೃಹದಲ್ಲಿ ಇಡಬಾರದು. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ನಿಮ್ಮ ಬಾತ್ರೂಮ್ನಲ್ಲಿ ಅಂತಹ ವಸ್ತು ಇದ್ದರೆ, ತಕ್ಷಣವೇ ಅದನ್ನು ತೆಗೆದುಹಾಕಬೇಕು.
ಒಡೆದ ಪ್ಲಾಸ್ಟಿಕ್:
ಬಾತ್ ರೂಂನಲ್ಲಿ ಯಾವುದೇ ರೀತಿಯ ಮುರಿದ ಪ್ಲಾಸ್ಟಿಕ್ ವಸ್ತುಗಳನ್ನು ಇಡಬಾರದು. ಇದರಿಂದ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶ್ಯಾಂಪೂ ಇತ್ಯಾದಿ ಖಾಲಿ ಬಾಟಲಿಗಳನ್ನು ಬಾತ್ ರೂಂನಿಂದ ತೆಗೆಯಬೇಕು.
ಮುರಿದ ಚಪ್ಪಲಿಗಳು:
ಜನರು ಸಾಮಾನ್ಯವಾಗಿ ಬಾತ್ರೂಮ್ನಲ್ಲಿ ಬಳಸಲು ಮುರಿದ ಮತ್ತು ಹಳೆಯ ಚಪ್ಪಲಿಗಳನ್ನು ಇಡುತ್ತಾರೆ. ವಾಸ್ತುವಿನ ದೃಷ್ಟಿಯಿಂದ ಅದು ತಪ್ಪಾದ ಕ್ರಮ. ಹೀಗೆ ಮಾಡುವುದರಿಂದ ವಾಸ್ತು ದೋಷಗಳನ್ನು ಎದುರಿಸಬೇಕಾಗುತ್ತದೆ. ಇದು ಶನಿ ಗ್ರಹದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ.
ಒದ್ದೆ ಬಟ್ಟೆ:
ಒದ್ದೆ ಬಟ್ಟೆಗಳನ್ನು ಬಾತ್ರೂಮ್ನಲ್ಲಿ ಬಹುತೇಕರು ಇಡುತ್ತಾರೆ. ಆದರೆ ವಾಸ್ತುವಿನ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ನೀವು ಬಾತ್ರೂಮ್ನಲ್ಲಿ ಒದ್ದೆಯಾದ ಬಟ್ಟೆಗಳನ್ನು ಬಿಡಬಾರದು. ತೊಳೆದ ನಂತರ ಅವುಗಳನ್ನು ಹೊರಗೆ ಒಣಗಿಸಬೇಕು.