ಮನೆಯಲ್ಲಿ ಸುಖ ಶಾಂತಿ ನೆಲಸಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಮನೆಯಲ್ಲಿ ಸಕಾರಾತ್ಮಕ ಅಂಶ ನೆಲಸಬೇಕು ಅಂದರೆ ವಾಸ್ತು ಶಾಸ್ತ್ರದಲ್ಲಿ ಹಲವು ಮಾರ್ಗಗಳಿವೆ. ಇದರಲ್ಲಿ ಒಂದು ಸುಲಭವಾದ ವಿಧಾನ ಅಂದರೆ ಲಾಫಿಂಗ್ ಬುದ್ಧ.
ವಾಸ್ತುಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧ ಮನೆಯಲ್ಲಿ ಇದ್ದರೆ ಸಮೃದ್ಧಿ ಇರುತ್ತದೆ. ಆದರೆ ತಪ್ಪಾದ ಜಾಗದಲ್ಲಿ ಇರಿಸಿದ್ರೆ ಮನೆಗೆ ನಷ್ಟ ಕೂಡ ಉಂಟಾಗುತ್ತದೆ. ಹೀಗಾಗಿ ಲಾಫಿಂಗ್ ಬುದ್ಧನನ್ನ ಮನೆಯಲ್ಲಿ ಎಲ್ಲೆಲ್ಲಿ ಇಡಬಹುದು ಹಾಗೂ ಇಡಬಾರದು ಇನ್ನೋದಕ್ಕೆ ಇಲ್ಲಿದೆ ಮಾಹಿತಿ.
ಲಾಫಿಂಗ್ ಬುದ್ಧನ ಕುರಿತಾದ ಸಾಕಷ್ಟು ವಿಚಾರಗಳು ಪ್ರಚಲಿತದಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿದ್ದರೆ, ಮನೆಯಲ್ಲಿ ಚೈತನ್ಯವೇ ಇಲ್ಲದಿದ್ದರೆ ನೀವು ಮನೆಯಲ್ಲಿ ಲಾಫಿಂಗ್ ಬುದ್ಧನ ಮೂರ್ತಿಯನ್ನ ಇರಿಸಬಹುದು.
ಲಾಫಿಂಗ್ ಬುದ್ಧನ ಪ್ರತಿಮೆಯನ್ನ ವ್ಯಾಪಾರ ಸ್ಥಳಗಳಲ್ಲಿ ಇಡಬೇಕು. ಆದರೆ ಇದು ನೆಲದಿಂದ ಎರಡೂವರೆ ಅಡಿ ಎತ್ತರದಲ್ಲಿ ಇರಬೇಕು. ಹಾಗೂ ಮನೆಯ ಮುಖ್ಯದ್ವಾರದ ಎದುರಿಗೇ ಇರಬೇಕು.
ಬುದ್ಧನ ನಗುವಿನ ಮುಖ ಸುಖ ಹಾಗೂ ಸಂಪನ್ನತೆಯ ಸಂಕೇತವಾಗಿದೆ. ಇದರ ದೊಡ್ಡ ಹೊಟ್ಟೆ ಸಮೃದ್ಧಿಯ ಸಂಕೇತವಾಗಿದೆ. ಮನೆಯ ಮುಖ್ಯದ್ವಾರದ ಎದುರು ಲಾಫಿಂಗ್ ಬುದ್ಧನ ಮೂರ್ತಿ ಇಡೋದ್ರಿಂದ ಮನೆಯಲ್ಲಿ ಸಕಾರಾತ್ಮಕ ಅಂಶ ಹೆಚ್ಚಲಿದೆ.