ಕೂದಲಿನ ಆರೋಗ್ಯ ಕೂಡ ಬಹಳ ಮುಖ್ಯ. ಕೂದಲಿಗೆ ಆಯಿಲ್ ಮಸಾಜ್ ಮಾಡ್ತಿದ್ದರೆ ಕೂದಲು ದಪ್ಪವಾಗಿ, ಕಪ್ಪಾಗಿ ಬೆಳೆಯುತ್ತದೆ. ಪ್ರತಿ ದಿನ ತಲೆ ಸ್ನಾನ ಮಾಡುವ ಪುರುಷರು, ಪ್ರತಿ ದಿನ ತಲೆಗೆ ಎಣ್ಣೆ ಹಚ್ಚುತ್ತಾರೆ. ಮಹಿಳೆಯರು ವಾರಕ್ಕೆ ಎರಡು ಬಾರಿ ಎಣ್ಣೆ ಸ್ನಾನ ಮಾಡುತ್ತಾರೆ. ನಿಮ್ಮ ನೆತ್ತಿಗೆ, ಕೂದಲಿಗೆ ಎಣ್ಣೆ ಹಾಕೋದ್ರಿಂದ ಕೂದಲು ಮಾತ್ರವಲ್ಲದೆ ಇಡೀ ದೇಹದ ಆರೋಗ್ಯಕ್ಕೆ ಒಳ್ಳೆಯದು. ಇದು ಒಣ ಚರ್ಮ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಶಾಸ್ತ್ರದಲ್ಲೂ ತಲೆಗೆ ಎಣ್ಣೆ ಹಾಕುವ ವಿಷ್ಯದ ಬಗ್ಗೆ ವಿವರ ಇದೆ. ಶಾಸ್ತ್ರದಲ್ಲಿ ತಲೆಗೆ ಎಲ್ಲ ದಿನ ಎಣ್ಣೆ ಹಚ್ಚುವುದನ್ನು ನಿಷೇಧಿಸಲಾಗಿದೆ.
ವಾರದಲ್ಲಿ ಕೆಲ ದಿನ ಕೂದಲಿಗೆ ಎಣ್ಣೆ ಹಚ್ಚಲು ಶುಭವಾಗಿದ್ದರೆ ಮತ್ತೆ ಕೆಲ ದಿನ ಅಪ್ಪಿತಪ್ಪಿಯೂ ಎಣ್ಣೆ ಹಚ್ಚಬಾರದು. ಇದ್ರಿಂದ ಸಮಸ್ಯೆ ಎದುರಾಗುತ್ತದೆ. ಅಶುಭ ಪರಿಣಾಮ ಉಂಟಾಗುತ್ತದೆ.
ಶಾಸ್ತ್ರಗಳ ಪ್ರಕಾರ, ಮಂಗಳವಾರ ನೀವು ತಲೆಗೆ ಎಣ್ಣೆ ಹಚ್ಚಬಾರದು. ಹೀಗೆ ಮಾಡಿದ್ರೆ ಜೀವನದಲ್ಲಿ ಸದಾ ದುಃಖ ಕಾಡುತ್ತದೆ. ಎಂದಿಗೂ ಸಮಸ್ಯೆಯಿಂದ ಮುಕ್ತಿ ಸಿಗೋದಿಲ್ಲ.
ಶುಕ್ರವಾರ ಕೂಡ ನೀವು ಕೂದಲಿಗೆ ಎಣ್ಣೆ ಹಚ್ಚಬಾರದು. ಇದ್ರಿಂದ ನೀವು ಕೆಲಸದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಗುರುವಾರ : ಗುರುವಾರ ಎಣ್ಣೆ ಹಚ್ಚಿದ್ರೆ ನಿಮ್ಮ ಅದೃಷ್ಟ, ದುರಾದೃಷ್ಟವಾಗಿ ಬದಲಾಗುತ್ತದೆ. ಎಲ್ಲ ಕೆಲಸದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.
ಭಾನುವಾರ : ವಾರಾಂತ್ಯದಲ್ಲಿ ರಜೆ ಇರುವ ಕಾರಣ ಅನೇಕರು ಭಾನುವಾರ ತಲೆಗೆ ಎಣ್ಣೆ ಹಾಕಿಕೊಳ್ತಾರೆ. ಆದ್ರೆ ಶಾಸ್ತ್ರ ಇದನ್ನು ನಿಷೇಧಿಸಿದೆ. ಜೀವನ ಪರ್ಯಂತ ರೋಗ ಅವರನ್ನು ಆವರಿಸಿರುತ್ತದೆ.
ಯಾವ ದಿನ ಎಣ್ಣೆ ಹಚ್ಚಬೇಕು? : ಸೋಮವಾರ ನೀವು ತಲೆಗೆ ಎಣ್ಣೆ ಹಚ್ಚಿದ್ರೆ ನಿಮ್ಮ ಸೌಂದರ್ಯ ವೃದ್ಧಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದೇ ಬುಧವಾರ ಕೂಡ ನೀವು ಎಣ್ಣೆ ಹಚ್ಚಬಹುದು. ಸೌಭಾಗ್ಯದಲ್ಲಿ ವೃದ್ಧಿಯಾಗುತ್ತದೆ. ಇನ್ನು ಕೊನೆ ದಿನ ಶನಿವಾರ. ಈ ದಿನ ತಲೆಗೆ ಎಣ್ಣೆ ಹಚ್ಚಿಕೊಂಡ್ರೆ ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ.