![](https://kannadadunia.com/wp-content/uploads/2022/01/derail.png)
ಪಣಜಿ: ಗೋವಾದಲ್ಲಿ ಅಮರಾವತಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದೆ. ಗೋವಾದ ದೂಧ್ ಸಾಗರ್ – ಕಾರಂಜೋಲ್ ಮಾರ್ಗದಲ್ಲಿ ಘಟನೆ ನಡೆದಿದೆ.
ವಾಸ್ಕೋ -ಹೌರಾ ನಡುವೆ ಸಂಚರಿಸುವ ಅಮರಾವತಿ ಎಕ್ಸ್ ಪ್ರೆಸ್ ರೈಲು ಬೆಳಿಗ್ಗೆ 6.30 ಕ್ಕೆ ವಾಸ್ಕೋದಿಂದ ಹೊರಟಿತ್ತು. ಕಾರಂಜೋಲ್ ಸಮೀಪ ಹಳಿತಪ್ಪಿದೆ. ರೈಲಿನ ಮುಂಭಾಗದ ಗಾಲಿಗಳು ಹಳಿತಪ್ಪಿವೆ. ಲೋಕೋ ಪೈಲೆಟ್ ಚಾಣಾಕ್ಷತನದಿಂದ ಭಾರಿ ದುರಂತ ತಪ್ಪಿದೆ. ತಕ್ಷಣವೇ ಅಪಘಾತ ಪರಿಹಾರ ರೈಲು ಸ್ಥಳಕ್ಕೆ ಧಾವಿಸಿದೆ. ಬೇರೆ ಇಂಜಿನ್ ಬಳಸಿ ಅಮರಾವತಿ ರೈಲು ಸಂಚಾರ ಆರಂಭಿಸಿದೆ.