alex Certify ಉಡುಪಿಯಲ್ಲಿ ವರುಣಾರ್ಭಟ : ಸಿಡಿಲು ಬಡಿದು ಯುವಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಡುಪಿಯಲ್ಲಿ ವರುಣಾರ್ಭಟ : ಸಿಡಿಲು ಬಡಿದು ಯುವಕ ಸಾವು

ಉಡುಪಿ : ರಾಜ್ಯದ ಹಲವು ಕಡೆ ನಿನ್ನೆ ಗುಡುಗು ಸಿಡಲಿನ ಆರ್ಭಟ ಜೋರಾಗಿದ್ದು, ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ಸಾವನ್ನಪ್ಪಿದ್ದಾನೆ.

ಮೃತನನ್ನು ಬ್ರಹ್ಮಾವರ ತಾಲೂಕಿನ ಮಂದಾರ್ತಿ ಆವರ್ಸೆಯ ಪ್ರಮೋದ್ ಶೆಟ್ಟಿ ಎಂದು ಗುರುತಿಸಲಾಗಿದೆ. ಭಾರಿ ಮಳೆ ಹಿನ್ನೆಲೆ ಈತ ಮರದಡಿ ನಿಂತಿದ್ದನು. ಈ ವೇಳೆ ಪ್ರಮೋದ್ ಗೆ ಸಿಡಿಲು ಬಡಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಮೋದ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ .

ರಾಜ್ಯದ ಹಲವು ಕಡೆ ನಿನ್ನೆ ಭಾರಿ ಮಳೆಯಾಗಿದ್ದು, ಗುಡುಗು ಸಿಡಿಲಿನ ಆರ್ಭಟ ಕೂಡ ಜೋರಾಗಿತ್ತು. ಸಂಜೆ ವೇಳೆಗೆ ಚಿಕ್ಕಮಗಳೂರು, ಉಡುಪಿ ಸೇರಿದಂತೆ ಹಲವು ಕಡೆ ಮಳೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...