ನವದೆಹಲಿ : ಉತ್ತರ ಭಾರತದಲ್ಲಿ ವರುಣ ರಾಯನ ಆರ್ಭಟ ಜೋರಾಗಿದ್ದು, ಸುರಿದ ಭೀಕರ ರಣಮಳೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಒಂದೇ ವಾರದಲ್ಲಿ ಸುರಿದ ಮಹಾಮಳೆಗೆ ಉತ್ತರ ಭಾರತದಲ್ಲಿ ಜಲಪ್ರವಾಹ ಉಂಟಾಗಿದ್ದು, ಹಿಮಾಚಲ ಪ್ರದೇಶದಲ್ಲಿ 80 ಜನ ಮೃತಪಟ್ಟಿದ್ದಾರೆ. ಉತ್ತರಖಾಂಡ್ 8 ಮಂದಿ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಜನರು ಮೃತಪಟ್ಟಿದ್ದಾರೆ.
ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಜಲಪ್ರಳಯ ಉಂಟಾಗಿದೆ. ನೋಡನೋಡುತ್ತಿದ್ದಂತೆ, ಕಾರುಗಳ ಹಾಗೂ ಮನೆಗಳು ಕೊಚ್ಚಿಕೊಂಡು ಹೋಗಿದೆ. ದೆಹಲಿಯ ಯಮುನಾ ಸೇರಿದಂತೆ ಉತ್ತರ ಭಾರತದ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ.