ಮಂಡ್ಯ: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಜಾನುವಾರು ಸಂರಕ್ಷಕರು ಸಿಡಿದೆದ್ದಿದ್ದಾರೆ. ಹಳ್ಳಿಕಾರ್ ಒಡೆಯ ಎಂದೇ ಜನಪ್ರಿಯವಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಸಂರಕ್ಷಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ಹಳ್ಳಿಕಾರ್ ತಳಿಯ ಸಂರಕ್ಷಕರ ನಡುವೆ ನಡೆದ ಚರ್ಚಾಗೋಷ್ಠಿಯಲ್ಲಿ ವಾಗ್ವಾದ ನಡೆದು ವರ್ತೂರು ಸಂತೋಷ್ ಬೆಂಬಲಿಗರು ಗೋಷ್ಠಿಯಿಂದ ಅರ್ಧದಲ್ಲೇ ಎದ್ದು ನಡೆದಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ವಿಷಯ ತಿಳಿದ ವರ್ತೂರು ಸಂತೋಷ್ ಹಳ್ಳಿಕಾರ್ ಸಂರಕ್ಷಕರ ವಿರುದ್ಧವೇ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ವರ್ತೂರು ಮಾತಿಗೆ ಸಿಡಿದೆದ್ದಿರುವ ಹಳ್ಳಿಕಾರ್ ಸಂರಕ್ಷಕರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ವರ್ತೂರು ಸಂತೋಷ್ ಹಳ್ಳಿಕಾರ್ ಒಡೆಯನಲ್ಲ. ಆತ ಈ ರೀತಿ ಬಿಂಬಿಸಿಕೊಳ್ಳುತ್ತಿರುವುದು ಹಳ್ಳಿಕಾರ್ ಜನಾಂಗಕ್ಕೆ ಮಾಡುತ್ತಿರುವ ಅಪಮಾನ. ತಲತಲಾಂತರದಿಂದ ಹಳ್ಳಿಕಾರ್ ತಳಿ ಸಂರಕ್ಷಣೆ ಮಾಡುತ್ತಿರುವ ರೈತರ ಭಾವನೆಗಳಿಗೂ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಗೂಗಲ್ ನಲ್ಲಿಯೂ ಚೇರ್ ಮೆನ್ ಆಫ್ ಅಲ್ ಇಂಡಿಯಾ ಹಳ್ಳಿಕಾರ್ ಕನ್ಸರ್ವೆಶನ್ ಎಂದು ತಪ್ಪು ಸಂದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಡುವುದಾಗಿ ಹಳ್ಳಿಕಾರ್ ಸಂರಕ್ಷಕ ರವಿ ಪಟೇಲ್ ತಿಳಿಸಿದ್ದಾರೆ.