alex Certify ವಿವಿಧ ಯೋಜನೆಯಡಿ ಲಕ್ಷಾಂತರ ರೂ. ಸಹಾಯಧನ: ಅರ್ಜಿ ಸಲ್ಲಿಕೆ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಿಧ ಯೋಜನೆಯಡಿ ಲಕ್ಷಾಂತರ ರೂ. ಸಹಾಯಧನ: ಅರ್ಜಿ ಸಲ್ಲಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಮಡಿಕೇರಿ: 2023-24 ನೇ ಸಾಲಿನ ಮಡಿಕೇರಿ ನಗರಸಭಾ ನಿಧಿ ಹಾಗೂ 2024-25 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನದಡಿ ಅನುಮೋದಿತ ಕ್ರೀಯಾಯೋಜನೆಯಂತೆ ಶೇ.24.10ರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ, ಶೇಕಡ 7.25 ರ ಇತರೆ ಬಡ ಜನರ ಕಲ್ಯಾಣ ಕಾರ್ಯಕ್ರಮ ಹಾಗೂ ಶೇಕಡ 5ರ ಅಂಗವಿಕಲರ ಅಭಿವೃದ್ಧಿ ಯೋಜನೆಯ, ವೈಯುಕ್ತಿಕ  ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ಅನುದಾನ ಹಾಗೂ ವಿವರ ಇಂತಿದೆ.

ಬಡಜನರ ಕಲ್ಯಾಣ ಕಾರ್ಯಕ್ರಮ:

ಆಯ್ದ ಇತರೆ ಬಡ ಸಣ್ಣ ಉದ್ದಿಮೆದಾರರಿಗೆ ಸಹಾಯಧನ 1 ಲಕ್ಷ ರೂ., ಇತರೆ ಬಡಜನರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಹಾಯಧನ 2.94 ಲಕ್ಷ ರೂ., ಸ್ವಂತ ಉದ್ಯೋಗಕ್ಕಾಗಿ ಬ್ಯಾಂಕ್ ಮೂಲಕ ಸಾಲ ಪಡೆದ ಫಲಾನುಭವಿಗಳಿಗೆ ಸಹಾಯ ಧನ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಧನ ಸಹಾಯ 1.18 ಲಕ್ಷ ರೂ.,

ಅಂಗವಿಕಲರ ಕಲ್ಯಾಣ ಕಾರ್ಯಕ್ರಮ:

ಅಂಗವಿಕಲರಿಗೆ ಪೋಷಣಾ ವೆಚ್ಚ ಪಾವತಿಸಲು ಸಹಾಯಧನ 3.56 ಲಕ್ಷ ರೂ., ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಹಾಯಧನ  2.03 ಲಕ್ಷ ರೂ..

ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮ:

ಆಯ್ದ ಪರಿಶಿಷ್ಟ ಜಾತಿ ಜನಾಂಗದವರ ಪಕ್ಕಾ ಮನೆ ನಿರ್ಮಾಣ ಹಾಗೂ ಮೇಲ್ಚಾವಣಿ ದುರಸ್ತಿ, ಸಾಮಾಗ್ರಿ ಅಥವಾ ಅವಶ್ಯ ಸಾಮಾಗ್ರಿಗಾಗಿ ಸಹಾಯ ಧನ 4.72 ಲಕ್ಷ ರೂ., ಸಣ್ಣ ಉದ್ದಿಮೆದಾರರಿಗೆ ಸಹಾಯಧನ ರೂ. 1 ಲಕ್ಷ, ಆಯ್ದ ಪರಿಶಿಷ್ಟ ಜಾತಿ ಜನಾಂಗದವರಿಗೆ ಡ್ರೈವಿಂಗ್ ತರಬೇತಿ ನೀಡಲು ಸಹಾಯಧನ ನೀಡಲಾಗುವುದು.

ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮ:

ಆಯ್ದ ಪರಿಶಿಷ್ಟ ಪಂಗಡ ಜನಾಂಗದವರ ಫಲಾನುಭವಿಯ ಪಕ್ಕಾ ಮನೆ ನಿರ್ಮಾಣ ಹಾಗೂ ಮೇಲ್ಚಾವಣಿ ದುರಸ್ತಿ, ಸಾಮಾಗ್ರಿ ಅಥವಾ ಅವಶ್ಯ ಸಾಮಾಗ್ರಿಗಾಗಿ ಸಹಾಯ ಧನ 1.9 ಲಕ್ಷ ರೂ.,

ಅರ್ಜಿ ಸಲ್ಲಿಸಲು ಜುಲೈ 12 ಕೊನೆ ದಿನವಾಗಿದೆ.

ಸಲ್ಲಿಸಬೇಕಾದ ದಾಖಲಾತಿಗಳು:

ಜಾತಿ ಪ್ರಮಾಣಪತ್ರ, ಪ್ರಸಕ್ತ ಸಾಲಿನ ಆದಾಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ನಮೂನೆ-3 ಮನೆಯ ಫೋಟೋ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಪಡಿತರ ಚೀಟಿ, ಛಾಯಾಚಿತ್ರ ಸಂಬಂಧಿತ ದಾಖಲಾತಿಗಳು ಹಾಗೂ ಮುಂದೆ ಅಗತ್ಯ ಪಡಿಸಬಹುದಾದ ಇತರೆ ದಾಖಲೆಗಳನ್ನು ನೀಡುವ ಷರತ್ತಿಗೆ ಒಳಪಡಿಸಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಮಡಿಕೇರಿ ನಗರಸಭೆ ನಲ್ಮ್ ವಿಭಾಗವನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...