ಬೆಂಗಳೂರು: ವರಾಹಿ ವರ್ಲ್ಡ್ ಆಫ್ ಜ್ಯುವೆಲ್ಲರಿ ಶಾಪ್ ಮಾಲಕಿ ವನಿತಾ ಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಪಿ ಐಶ್ವರ್ಯಾ ಗೌಡ ನಾನು ಯಾವುದೇ ವಂಚನೆ ಮಾಡಿಲ್ಲ. ಎಲ್ಲರನ್ನೂ ಕರೆಸಿ ವನಿತಳೆ ಅಂಗಡಿ ತೋರಿಸುತ್ತಿದ್ದಳು. ನನ್ನದು ಮಾತ್ರವಲ್ಲ ಈ ಶೋ ರೂಂ ನಿಮ್ಮದೆ ಎಂದು ಹೇಳುತ್ತಿದಳು ಎಂದು ಆರೋಪಿಸಿದ್ದಾರೆ.
ನನಗಿಂತ ಹೆಚ್ಚು ದೊಡ್ಡ ದೊಡ್ಡವರ ಪರಿಚಯ ವನಿತಾಳಿಗಿದೆ. ನಿಮ್ಮ ಬ್ಲಾಕ್ ಮನಿಯನ್ನು ವೈಟ್ ಮನಿ ಮಡ್ತೀನಿ. ನಿಮ್ಮ ಫಂಡ್ ತಂದು ಇಲ್ಲಿ ಹಾಕಿ ಅಂತಾ ಹೇಳುತ್ತಿದ್ದಳು. ವನಿತಾ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾಳೆ. ನನ್ನ ಮತ್ತು ವನಿತಾ ನಡುವೆ ಚಿನ್ನ, ಹಣಕ್ಕೆ ವಿಷಯ ಸೀಮಿತವಾಗಿಲ್ಲ. ಧರ್ಮ, ಡಿ.ಕೆ.ಸುರೇಶ್, ವಿನಯ್ ಕುಲಕರ್ಣಿ ಯಾಕೆ ಎಂಟ್ರಿಯಾದರು? ಇದರ ಹಿಂದೆ ಯಾರು ಇದ್ದಾರೆ ಎಲ್ಲವನ್ನೂ ಹೇಳುತ್ತೇನೆ.
ಇನ್ನೆರಡು ದಿನಗಳಲ್ಲಿ ಸಾಕ್ಷಿ ಸಮೇತ ದಾಖಲೆ ಬಿಡುಗಡೆ ಮಾಡುವುದಾಗಿ ಐಶ್ವರ್ಯ ಗೌಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.