
ಬೆಳಗಾವಿ: ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ನಡೆದಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಕತಿ ಠಾಣೆ ಸಿಪಿಐ ಅವರನ್ನು ಅಮಾನತುಗೊಳಿಸಲಾಗಿದೆ.
ಕಾಕತಿ ಠಾಣೆ ಸಿಪಿಐ ವಿಜಯ್ ಸಿನ್ನೂರ್ ಅಮಾನತುಗೊಂಡವರು. ಮಂಟಮೂರಿಯಲ್ಲಿ ಮಹಿಳೆಯನ್ನು ವಿಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ತಡರಾತ್ರಿ 3 ಗಂಟೆಗೆ ಸಿಪಿಐಗೆ ಬಂದಿತ್ತು. ಆದರೂ ತಕ್ಷಣ ಸ್ಥಳಕ್ಕೆ ತೆರಳದೇ ಬೆಳಿಗ್ಗೆ 7 ಗಂಟೆಗೆ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಈ ಬಗ್ಗೆ ಎಸಿಪಿ ಕಮಿಷನರ್ ಗೆ ವರದಿ ನೀಡಿದ್ದಾರೆ.
ಕರ್ತವ್ಯಲೋಪ, ನಿರ್ಲಕ್ಷ ಹಿನ್ನೆಲೆಯಲ್ಲಿ ಸಿಪಿಐ ವಿಜಯ್ ಸಿನ್ನೂರ್ ಅವರನ್ನು ಅಮಾನತುಗೊಳಿಸಿ ಕಮಿಷನರ್ ಸಿದ್ದರಾಮಪ್ಪ ಆದೇಶ ಹೊರಡಿಸಿದ್ದಾರೆ.