ಮಧ್ಯಪ್ರದೇಶದ ನ್ಯಾಯಾಧೀಶರೊಬ್ಬರ ಕಾರು ಚಾಲಕನ ಪುತ್ರಿ ಮೊದಲ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಳೆ.
ನೀಮುಚ್ ಜಿಲ್ಲೆಯ 25 ವರ್ಷದ ವಂಶಿತಾಳ ತಂದೆ ಅರವಿಂದ ಕುಮಾರ್ ಗುಪ್ತಾ ನೀಮುಚ್ ಜಿಲ್ಲೆಯ ಜಾವದ್ ಪಟ್ಟಣದ ನ್ಯಾಯಾಧೀಶರ ಕಾರಿನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೊಕ್ಕುಳಿಗೆ ‘ಜೇನುತುಪ್ಪ’ ಸವರುವುದರಿಂದ ಇದೆ ಇಷ್ಟೆಲ್ಲಾ ಲಾಭ
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಗುಪ್ತಾ, “ನನ್ನ ಮಗಳು ಜೈಪುರ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಳು. ನಂತರ ಇಂದೋರ್ ನ ಕೋಚಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಆಕೆಯ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದಕ್ಕೆ ನನಗೆ ಅತೀವ ಸಂತಸವಾಗಿದೆ ಮತ್ತು ಹೆಮ್ಮೆ ಎನಿಸುತ್ತಿದೆ’’ ಎಂದಿದ್ದಾರೆ.
ವಂಶಿತಾ ಮಾತನಾಡಿ, “ನನ್ನ ತಂದೆಯ ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಅವರು ನನಗೆ ಸದಾ ಪ್ರೋತ್ಸಾಹ ನೀಡುತ್ತಾರೆ’’ ಎಂದು ಹೇಳಿದ್ದಾರೆ.