ಮೈಸೂರು: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು ಲಭ್ಯವಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಪ್ರತಿ ರೈಲಿಗೂ ಹೆಚ್ಚುವರಿಯಾಗಿ ಎರಡು ಜನರಲ್ ಬೋಗಿಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಭಾರತ್ ರೈಲಿಗೆ ಜನರಲ್ ಬೋಗಿ ಸೇರ್ಪಡೆಯಿಂದ ಶ್ರೀ ಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ದೇಶಾದ್ಯಂತ ಹೊಸದಾಗಿ 13 ವಂದೇ ಭಾರತ್ ರೈಲು ಆರಂಭಿಸಲಾಗುತ್ತಿದ್ದು, ಮೂರು ತಿಂಗಳಲ್ಲಿ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಿಗುವ ಸಾಧ್ಯತೆ ಇದೆ. ತುಮಕೂರು, ಮೈಸೂರು, ಬೆಂಗಳೂರು ಕಡೆಗೆ ಮೂರು ಹೊಸ ಮೆಮು ರೈಲು ಆರಂಭಿಸಲಾಗುತ್ತದೆ. ಸೆಪ್ಟೆಂಬರ್ 27ರಂದು ತುಮಕೂರು -ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.