alex Certify ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್; ವಿಡಿಯೋ ವೈರಲ್

ದೇಶದ ರೈಲ್ವೇ ಮಾರ್ಗದ ಅತ್ಯಂತ ಸುಭದ್ರ ಹಳಿಗಳನ್ನು ಹೊಂದಿರುವ ಮಾರ್ಗಗಳಲ್ಲಿ ಒಂದಾದ ದೆಹಲಿ-ಭೋಪಾಲ್ ಮಾರ್ಗದಲ್ಲಿ ರೈಲುಗಳು ಸಾಮಾನ್ಯವಾಗಿ ತಮ್ಮ ಗರಿಷ್ಠ ವೇಗದಲ್ಲಿ ಸಂಚರಿಸುತ್ತವೆ. ಇದೇ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ದೇಶದಲ್ಲೇ ಅತ್ಯಂತ ವೇಗದ ಶತಾಬ್ದಿ ಎಕ್ಸ್‌ಪ್ರೆಸ್ ಎಂದು ಹೆಸರಾಗಿದೆ.

ಇದೀಗ ಮೇಲ್ಕಂಡ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲೊಂದು 160ಕಿಮೀ/ಗಂಟೆ ಗರಿಷ್ಠ ವೇಗದಲ್ಲಿ ಸಂಚರಿಸುವ ಮೂಲಕ ಪ್ರಯಾಣಿಕರ ಹುಬ್ಬೇರಿಸಿದೆ. ಆಗ್ರಾ ಕಂಟೋನ್ಮೆಂಟ್ ಹಾಗೂ ನಿಜಾಮುದ್ಧೀನ್‌ ನಿಲ್ದಾಣಗಳ ನಡುವೆ ಈ ವೇಗವನ್ನು ಪಡೆದಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌. ಏಪ್ರಿಲ್ 1, 2023ರಂದು ತನ್ನ ಉದ್ಘಾಟನಾ ಸಂಚಾರ ಆರಂಭಿಸಿದ ದೆಹಲಿ-ಭೋಪಾಲ್ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಅಂದು 161 ಕಿಮೀ/ಗಂಟೆ ಗರಿಷ್ಠ ವೇಗದಲ್ಲಿ ಸಂಚರಿಸಿತ್ತು.

ಈ ಗರಿಷ್ಠ ವೇಗಾನುಭವದ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌, “ದೇಶವು 140…145…150…160ಕಿಮೀ/ಗಂಟೆ ವೇಗದಲ್ಲಿ ಸಂಚರಿಸುತ್ತಿದೆ,” ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...