ದೇಶದಲ್ಲಿ ಬುಲೆಟ್ ರೈಲಿನ ಕುರಿತು ಚರ್ಚೆ ನಡೆದಿರುವಾಗಲೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಕೇವಲ 52 ಸೆಕೆಂಡುಗಳಲ್ಲಿ 0 ಯಿಂದ 100 kmph ವೇಗ ತಲುಪುವ ಮೂಲಕ ಬುಲೆಟ್ ರೈಲಿನ ದಾಖಲೆಯನ್ನು ಮುರಿದಿದೆ.
ಶುಕ್ರವಾರದಂದು ಅಹಮದಾಬಾದ್ ನಿಂದ ಮುಂಬೈಗೆ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲು ಸಂಚರಿಸಿದ ವೇಳೆ ಈ ಸಾಧನೆ ಮಾಡಲಾಗಿದೆ. ಬುಲೆಟ್ ರೈಲು 0-100 kmph ವೇಗ ತಲುಪಲು 55 ಸೆಕೆಂಡುಗಳನ್ನು ತೆಗೆದುಕೊಂಡಿದ್ದರೆ, ವಂದೇ ಭಾರತ್ ಎಕ್ಸ್ ಪ್ರೆಸ್ ಕೇವಲ 52 ಸೆಕೆಂಡುಗಳನ್ನು ತೆಗೆದುಕೊಂಡಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತಂತೆ ಟ್ವೀಟ್ ಮಾಡಿದ್ದು, ರೈಲ್ವೆ ಸುರಕ್ಷತಾ ಕಮಿಷನರ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ವಂದೇ ಭಾರತ್ ಎಕ್ಸ್ ಪ್ರೆಸ್ ನ ಗರಿಷ್ಠ ವೇಗಮಿತಿ 180 ಕಿಲೋಮೀಟರ್ಗಳು ಎಂದು ಹೇಳಲಾಗಿದೆ.
ಈ ಮೊದಲು 0-100 kmph ವೇಗ ತಲುಪಲು ವಂದೇ ಭಾರತ್ ಎಕ್ಸ್ ಪ್ರೆಸ್ 54.6 ಸೆಕೆಂಡ್ ಗಳನ್ನು ತೆಗೆದುಕೊಂಡಿತ್ತು ಆಗ ಅದರ ಗರಿಷ್ಠ ವೇಗ 160 ಕಿಲೋಮೀಟರ್ಗಳಾಗಿತ್ತು. ಬಳಿಕ 38 ಟನ್ ತೂಕವನ್ನು ಕಡಿಮೆ ಮಾಡಿದ ಬಳಿಕ ಈಗ ಗರಿಷ್ಠ ವೇಗಮಿತಿ 180 ಕಿಲೋಮೀಟರ್ ನೊಂದಿಗೆ ಪ್ರತಿ ಗಂಟೆಗೆ 0-100 kmph ವೇಗ ತಲುಪಲು 52 ಸೆಕೆಂಡುಗಳನ್ನು ತೆಗೆದುಕೊಂಡಿದೆ.