
ಶಂಕರ್ ರಾಮನ್ ನಿರ್ದೇಶನದ ಶೋಕ್ದಾರ್ ದನ್ವೀರ್ ಅಭಿನಯದ ಬಹು ನಿರೀಕ್ಷಿತ ‘ವಾಮನ’ ಚಿತ್ರದ ಆಕ್ಷನ್ ಟೀಸರ್ ಇದೇ ತಿಂಗಳು ಆಗಸ್ಟ್ 17ರಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಚಿತ್ರತಂಡ ತನ್ನ ಅಧಿಕೃತ instagram ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದನ್ವೀರ್ ಗೌಡ ಅಭಿಮಾನಿಗಳು ಪೋಸ್ಟರ್ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಚೇತನ್ ಗೌಡ ನಿರ್ಮಿಸಿದ್ದು, ದನ್ವೀರ್ ಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಆದಿತ್ಯ ಮೆನನ್, ಸಂಪತ್, ತಾರಾ, ಅವಿನಾಶ್, ಶಿವರಾಜ್ ಕೆಆರ್ ಪೇಟೆ, ಭೂಷಣ್, ಕಾಕ್ರೋಚ್ ಸುಧಿ, ಅಚ್ಯುತ್ ಕುಮಾರ್ ಸೇರಿದಂತೆ ಮೊದಲಾದ ತಾರಾ ಬಳಗವಿದೆ.
