alex Certify ‘ವಾಮನ’ ಚಿತ್ರದ ಆಕ್ಷನ್ ಟೀಸರ್ ರಿಲೀಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಮನ’ ಚಿತ್ರದ ಆಕ್ಷನ್ ಟೀಸರ್ ರಿಲೀಸ್‌

ಜಬರ್ದಸ್ತ್​ ಎಂಟ್ರಿ ನೀಡಿದ 'ವಾಮನ'; ಸಿಕ್ಕಾಪಟ್ಟೆ ಮಾಸ್​ ಅವತಾರದಲ್ಲಿ ಧನ್ವೀರ್​ ಮಿಂಚಿಂಗ್​ - Kannada News | Dhanveer Gowda starrer Vaamana Kannada movie teaser released | TV9 Kannada

ಈಗಾಗಲೇ ಹಾಡುಗಳ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ದನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದ ಆಕ್ಷನ್ ಟೀಸರ್ ವೊಂದನ್ನು ಇಂದು a2 ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ.

ಈ ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಭರ್ಜರಿ  ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಒಂದು ನಿಮಿಷ 36 ಸೆಕೆಂಡ್ ಗಳ ಈ  ಟೀಸರ್ ನಲ್ಲಿ ದನ್ವೀರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಶಂಕರ್ ರಾಮನ್ ನಿರ್ದೇಶನದ ಯಕ್ಷನ್ ಥ್ರಿಲ್ಲರ್ ಕಥಾಂದರ ಹೊಂದಿರುವ ಈ ಚಿತ್ರದಲ್ಲಿ ದನ್ವೀರ್ ಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದು, ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ಲಾಂಛನದಲ್ಲಿ ಚೇತನ್ ಗೌಡ ಬಂಡವಾಳ ಹೂಡಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ಎಂದು ಚಿತ್ರ ತಂಡ ಈ ಟೀಸರ್ ನಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...