
ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ರಾಜ್ಯ ಬಿಜೆಪಿ, ಭಷ್ಟ್ರರನ್ನು ಸಾಕಿ, ಪೋಷಿಸಿ, ರಕ್ಷಿಸುವ ಜವಾಬ್ದಾರಿ ಕಾಂಗ್ರೆಸ್ ಸರ್ಕಾರ ವಹಿಸಿಕೊಂಡಿರುವುದರಿಂದ ದಲಿತರ 187 ಕೋಟಿ ರೂ. ಕಂಡವರ ಪಾಲಾಗಿದೆ ಎಂದು ವಾಗ್ದಾಳಿ ನಡೆಸಿದೆ.
ದಲಿತರ ಕುರಿತು ಸಿಎಂ ಸಿದ್ದರಾಮಯ್ಯನವರು ಅಸಹನೆ, ಅಸಡ್ಡೆ ಹೊಂದಿದ ಪರಿಣಾಮ ಸಮುದಾಯದ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ 187 ಕೋಟಿ ರೂ. ಬಾರ್, ವೈನ್ ಶಾಪ್, ಆಭರಣ ಅಂಗಡಿಗಳ ಬ್ಯಾಂಕ್ ಖಾತೆಗಳ ಮೂಲಕ ಲೂಟಿಕೋರರ ಜೇಬು ಸೇರಿದೆ.
ದಲಿತರ ಹಿತಕಾಯದ ಮತ್ತು ಸಮುದಾಯದ ಹಣಕ್ಕೆ ರಕ್ಷಣೆ ಒದಗಿಸದೆ ಮೈಮರೆತಿರುವ ಸಿಎಂ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಬಹುಕೋಟಿ ಹಗರಣ ಹಣಕಾಸು ಇಲಾಖೆ ಕೈವಾಡವಿಲ್ಲದೆ ನಡೆಯುವುದು ಅಸಾಧ್ಯ. ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.