ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಂದ ಎರಡೇ ದಿನದಲ್ಲಿ 2.50 ಕೋಟಿ ನಗದು ಹಣವನ್ನು ಎಸ್ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದ ಪ್ರಮುಖ ಅರೋಪಿ ಸತ್ಯನಾರಾಯಣ ವರ್ಮಾಗೆ ಸೇರಿದ ಫ್ಲಾಟ್ ನಲ್ಲಿ 10 ಕೆ.ಜಿ ಚಿನ್ನದ ಬಿಸ್ಕೆಟ್ ನ್ನು ಎಸ್ ಐಟಿ ವಶಕ್ಕೆ ಪಡೆದಿತ್ತು. ಇದಿಗ ಮತ್ತೆ 6 ಕೆಜಿ ಚಿನ್ನ ಹಾಗೂ ಹೈದರಾಬಾದ್ ಬಿಲ್ಡರ್ ರೊಬ್ಬರಿಂದ 2.50 ಕೋಟಿ ನಗದು ಜಪ್ತಿ ಮಾಡಿದ್ದಾರೆ.
ಸರ್ಚ್ ವಾರೆಂಟ್ ಪಡೆದು ಹೈದರಾಬಾದ್ ನಲ್ಲಿರುವ ಸತ್ಯನಾರಾಯಣ ವರ್ಮಾ ಹಾಗೂ ಕಾಕಿ ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಿದ್ದ ಎಸ್ ಐಟಿ, ಸತ್ಯನಾರಾಯಣ ಅವರಿಂದ ಈವರೆಗೆ ಒಟ್ಟು 15 ಕೆಜಿ ಚಿನ್ನ ಜಪ್ತಿ ಮಾಡಿದೆ. ಮಧ್ಯವರ್ತಿ ಶ್ರೀನಿವಾಸ್ ನಿವಾಸದಲ್ಲಿ 1 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ.
ಅಲ್ಲದೇ ಕೆಲ ಬಿಲ್ಡರ್ ಗಳಿಗೆ ಕೊಟ್ಟಿದ್ದ ಹಣ ಕೂಡ ವಾಪಾಸ್ ಪಡೆಯಲಾಗಿದೆ. ಸದ್ಯ ಬಿಲ್ಡರ್ ಗಳು ಎರಡು ದಿನಗಳಲ್ಲಿ 2.5 ಕೋಟಿ ಹಣ ವಾಪಸ್ ನೀಡಿದ್ದಾರೆ. ಈ ಮೂಲಕ ಆರೊಪಿಗಳಿಂದ ಈವರೆಗೆ 48.5 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.