ಫೆಬ್ರವರಿ ತಿಂಗಳು ಶುರುವಾಗಿದೆ. ಫೆಬ್ರವರಿ ಅಂದ್ರೆ ಪ್ರೇಮಿಗಳಿಗೆ ಹಬ್ಬ. ಇದನ್ನು ಪ್ರೇಮಿಗಳ ತಿಂಗಳು ಎಂದೇ ಕರೆಯಲಾಗುತ್ತದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಣೆ ಮಾಡ್ತಿದ್ದರೂ ಇಡೀ ಒಂದು ವಾರ ವ್ಯಾಲೆಂಟೈನ್ಸ್ ವೀಕ್ ಇರುತ್ತದೆ. ಪ್ರೇಮಿಗಳ ದಿನಕ್ಕೆ ನೀವೂ ಕಾಯ್ತಿದ್ದು, ವಾರದ ಎಲ್ಲ ದಿನಗಳನ್ನು ಎಂಜಾಯ್ ಮಾಡುವ ಪ್ಲಾನ್ ನಲ್ಲಿದ್ದರೆ ವ್ಯಾಲೆಂಟೈನ್ಸ್ ವೀಕ್ ನಲ್ಲಿ ಯಾವ ದಿನ ಯಾವ ಡೇ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಮೊದಲೇ ಇದ್ರ ಬಗ್ಗೆ ತಿಳಿದಿದ್ದರೆ ಪ್ಲಾನ್ ಮಾಡೋದು ಸುಲಭ.
ವ್ಯಾಲೆಂಟೈನ್ಸ್ ವೀಕ್: ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 7ರಿಂದ ಶುರುವಾಗುತ್ತದೆ.
ಫೆಬ್ರವರಿ 7, ಬುಧವಾರ – ರೋಸ್ ಡೇ
ಫೆಬ್ರವರಿ 8, ಗುರುವಾರ – ಪ್ರಪೋಸ್ ಡೇ
ಫೆಬ್ರವರಿ 9, ಶುಕ್ರವಾರ – ಚಾಕೊಲೇಟ್ ಡೇ
ಫೆಬ್ರವರಿ 10, ಶನಿವಾರ – ಟೆಡ್ಡಿ ಡೇ
ಫೆಬ್ರವರಿ 11, ಭಾನುವಾರ – ಪ್ರಾಮಿಸ್ ಡೇ
ಫೆಬ್ರವರಿ 12, ಸೋಮವಾರ – ಹಗ್ ಡೇ
ಫೆಬ್ರವರಿ 13, ಮಂಗಳವಾರ – ಕಿಸ್ ಡೇ
ಫೆಬ್ರವರಿ 14 ಬುಧವಾರ – ಪ್ರೇಮಿಗಳ ದಿನ
ಪ್ರೇಮಿಗಳ ದಿನ ಇತ್ತೀಚೆಗೆ ಆಚರಣೆಗೆ ಬಂದಿದ್ದಲ್ಲ. ರೋಮನ್ ರಾಜ ಕ್ಲಾಡಿಯಸ್ ಆಳ್ವಿಕೆಯಲ್ಲಿ ವ್ಯಾಲೆಂಟೈನ್ಸ್ ಡೇ ಪ್ರಾರಂಭವಾಯಿತು. ರೋಮನ್ ಪಾದ್ರಿಯಾದ ಸಂತ ವ್ಯಾಲೆಂಟೈನ್ ಮೊದಲು ಪ್ರೇಮಿಗಳ ದಿನವನ್ನು ಆಚರಿಸಿದರು. ಹಾಗಾಗಿಯೇ ಪ್ರತಿ ವರ್ಷ ಸೇಂಟ್ ವ್ಯಾಲೆಂಟೈನ್ ಅವರ ನೆನಪಿಗಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗ್ತಿದೆ.