ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಗಿನ್ನೆಸ್ ವಿಶ್ವ ದಾಖಲೆ ಮಾಡಲು ನಿರ್ಧರಿಸಿದ್ದರು. ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಿ ದಾಖಲೆ ಮಾಡಲು ಅವರು ತೀರ್ಮಾನಿಸಿ ಈ ಹಿನ್ನೆಲೆಯಲ್ಲಿ ಅವರು 4 ನಿಮಿಷ ಮತ್ತು 6 ಸೆಕೆಂಡ್ಗಳ ಕಾಲ ನೀರೊಳಗಿನ ಸುದೀರ್ಘ ಚುಂಬನ ಮಾಡಿ ದಾಖಲೆ ಮಾಡಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಬೆತ್ ನೀಲ್ ಮತ್ತು ಮೈಲ್ಸ್ ಕ್ಲೌಟಿಯರ್ ಈ ದಾಖಲೆ ಮಾಡಿರುವುದಾಗಿ ಹೇಳಿದೆ. ಅಷ್ಟಕ್ಕೂ ಈ ದಾಖಲೆಯನ್ನು ಈ ಜೋಡಿ ಮಾಡಿರುವುದು ಇದೇ ಮೊದಲೇನಲ್ಲ. 13 ವರ್ಷಗಳ ಹಿಂದೆ ಇದೇ ಜೋಡಿ, ಇಟಾಲಿಯನ್ ಟಿವಿ ಶೋ ಲೋ ಶೋ ಡೀನಲ್ಲಿ ದಾಖಲೆ ಮಾಡಿತ್ತು. 3 ನಿಮಿಷ 24 ಸೆಕೆಂಡುಗಳ ಕಾಲ ನೀರಿನ ಅಡಿಯಲ್ಲಿ ಚುಂಬಿಸಲು ಅವರು ಸಮರ್ಥರಾಗಿದ್ದರು.
ಆರಂಭದಲ್ಲಿ ಇದಕ್ಕಾಗಿ ತಯಾರಿ ಮಾಡುವಾಗ ಇಬ್ಬರೂ ತುಂಬಾ ಕಷ್ಟಪಟ್ಟಿರುವುದಾಗಿ ಜೋಡಿ ಹೇಳಿಕೊಂಡಿದೆ. ಉಸಿರು ಹಿಡಿದಿಟ್ಟುಕೊಳ್ಳುವ ಅಭ್ಯಾಸಗಳನ್ನು ತೀವ್ರವಾಗಿ ನಡೆಸಿದೆವು. ಆರಂಭದಲ್ಲಿ ಕೆಲವು ಸೆಕೆಂಡ್ಗಳು ಮಾತ್ರ ನೀರೊಳಗಿನ ಚುಂಬಿಸಲು ಸಾಧ್ಯವಾಗುತ್ತಿತ್ತು. ಹಲವು ದಿನಗಳ ಸತತ ಪರಿಶ್ರಮದಿಂದ ದಾಖಲೆ ಸ್ಥಾಪಿಸಿರುವುದಾಗಿ ಹೇಳಿದ್ದಾರೆ.
https://youtu.be/huL5b5XJgnc