ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ವೈವಾಹಿಕ ಜೀವನ ಸುಖವಾಗಿರಬೇಕು, ಸಂಬಂಧ ಇನ್ನಷ್ಟ ಗಟ್ಟಿಯಾಗಿರಬೇಕು ಎಂದು ಬಯಸುವವರು ಕಾಮದೇವನನ್ನು ಪೂಜಿಸಬೇಕು. ಪ್ರೀತಿಯ ಜೀವನವನ್ನು ಸುಧಾರಿಸಲು ಪ್ರೇಮಿಗಳ ದಿನದಂದು ಕಾಮದೇವನನ್ನು ಪೂಜಿಸಿ. ಕಾಮದೇವ ಮತ್ತು ರತಿಯ ಕೃಪೆಯಿಂದ ಪ್ರೇಮ ಸಂಬಂಧಗಳು ಮಧುರವಾಗುತ್ತವೆ. ಸಂಬಂಧದಲ್ಲಿದ್ದ ಸಮಸ್ಯೆ, ಕೋಪಗಳು ದೂರವಾಗಿ ಪ್ರೀತಿಸಿದ ವ್ಯಕ್ತಿಗಳು ಹತ್ತಿರವಾಗ್ತಾರೆ.
ಪ್ರೇಮಿಗಳ ದಿನದಂದು ಅಥವಾ ಇನ್ನಾವುದೇ ದಿನದಂದು ಕಾಮದೇವನನ್ನು ಪೂಜಿಸಬಹುದು. ಗಂಡ ಹೆಂಡತಿ ಒಟ್ಟಿಗೆ ಈ ಪೂಜೆಯನ್ನು ಮಾಡಬೇಕು. ಸಂಗಾತಿಯೊಂದಿಗೆ ಪೂಜಾ ಸ್ಥಳದಲ್ಲಿ ಕಾಮದೇವ ಮತ್ತು ರತಿಯ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಬೇಕು. ಕಾಮದೇವನಿಗೆ ಅಕ್ಷತೆ, ಹೂವು, ಹಣ್ಣು, ಶ್ರೀಗಂಧ, ಅಡಿಕೆ, ವೀಳ್ಯದೆಲೆ, ಸುಗಂಧ, ಗುಲಾಬಿ ಬಣ್ಣದ ಬಟ್ಟೆ, ಸೌಂದರ್ಯ ಸಾಮಗ್ರಿ, ಧೂಪ, ದೀಪ, ಸಿಹಿತಿಂಡಿ ಇತ್ಯಾದಿಗಳನ್ನು ಅರ್ಪಿಸಬೇಕು. ಪತ್ನಿ ರತಿಯನ್ನು ಪೂಜಿಸಬೇಕು. ನಂತ್ರ ನಿಮ್ಮ ಆಸೆಯನ್ನು ಅವರ ಮುಂದಿಡಿ. ಪೂಜೆ ವೇಳೆ ಕಾಮದೇವನ ಮಂತ್ರವನ್ನು ಜಪಿಸಬಹುದು.
ಈ ಪೂಜೆ ಮಾಡಿದ್ರೆ ಕಾಮದೇವ ಹಾಗೂ ರತಿ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗಿದೆ. ಸಂಬಂಧ ಗಟ್ಟಿಯಾಗಿ, ಪ್ರೀತಿ ಹೆಚ್ಚುತ್ತದೆ. ಜಾತಕದಲ್ಲಿ ಶುಕ್ರ ಗ್ರಹ ಗಟ್ಟಿಯಾಗಿದ್ದರೆ, ಶುಭವಾಗಿದ್ದರೆ ಪ್ರೇಮ ಸಂಬಂಧ ಗಟ್ಟಿಯಾಗಿರುತ್ತದೆ ಎಂದು ನಂಬಲಾಗಿದೆ.