ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೇಮಿಗಳು ಸಂಗಾತಿಗೆ ಉಡುಗೊರೆ ನೀಡಲು ತಯಾರಿ ನಡೆಸ್ತಿದ್ದಾರೆ. ಆನ್ಲೈನ್, ಆಫ್ಲೈನ್ ಶಾಪ್ ಗಳಲ್ಲಿ ಉಡುಗೊರೆ ಹುಡುಕಾಟ ಶುರುವಾಗಿದೆ. ಯಾವ ಉಡುಗೊರೆ ನೀಡ್ಬೇಕು ಎನ್ನುವ ಚಿಂತೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಸಂಗಾತಿಗೆ ಯಾವುದು ಇಷ್ಟ ಎಂಬುದನ್ನು ನೋಡಿ, ಜನರು ಖರೀದಿ ಮಾಡ್ತಾರೆ.
ವಾಸ್ತು ಶಾಸ್ತ್ರಗಳಲ್ಲಿ ಉಡುಗೊರೆಗೂ ಮಹತ್ವದ ಸ್ಥಾನ ನೀಡಲಾಗಿದೆ. ನೀವು, ನಿಮ್ಮಿಷ್ಟದ ಅಥವಾ ಅವರಿಷ್ಟದ ವಸ್ತುವನ್ನು ಉಡುಗೊರೆ ರೂಪದಲ್ಲಿ ನೀಡುವಾಗ್ಲೂ ಶಾಸ್ತ್ರದ ಬಗ್ಗೆ ಸ್ವಲ್ಪ ಗಮನ ನೀಡಿ. ಕೆಲ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ರೆ ಸಂಬಂಧ ಹಾಳಾಗುತ್ತದೆ. ವ್ಯಾಲಂಟೈನ್ಸ್ ಡೇ ದಿನ ಕೆಲ ವಸ್ತುವನ್ನು ಉಡುಗೊರೆ ರೂಪದಲ್ಲಿ ನೀಡಬಾರದು.
ಮುಳುಗುವ ಸೂರ್ಯ : ಮುಳುಗುವ ಸೂರ್ಯನನ್ನು ನೋಡಲು ಬಲು ಅಂದ. ಅದ್ರ ಫೋಟೋಗಳು ಗಮನ ಸೆಳೆಯುತ್ತವೆ. ಆದ್ರೆ ನಿಮ್ಮ ಸಂಗಾತಿಗೆ ಪ್ರೇಮಿಗಳ ದಿನದಂದು ಅಪ್ಪಿತಪ್ಪಿಯೂ ಮುಳುಗುವ ಸೂರ್ಯನ ಫೋಟೋ ಉಡುಗೊರೆಯಾಗಿ ನೀಡಬೇಡಿ. ಇದು ಸಂಬಂಧವನ್ನು ಹಾಳು ಮಾಡುತ್ತದೆ. ಆರ್ಥಿಕ ಸಮಸ್ಯೆ ಎದುರಾಗುತ್ತದೆ.
ಕಪ್ಪು ಬಣ್ಣದ ಬಟ್ಟೆ : ಉಡುಗೊರೆ ರೂಪದಲ್ಲಿ ಕಪ್ಪು ಬಣ್ಣದ ಬಟ್ಟೆಯನ್ನೂ ನೀಡಬೇಡಿ. ದುಃಖ, ನೋವಿಗೆ ಇದು ಕಾರಣವಾಗುತ್ತದೆ.
ಚಪ್ಪಲಿ : ನೀವು ಪ್ರೇಮಿಗಳ ದಿನದಂದು ಚಪ್ಪಲಿಯನ್ನು ಗಿಫ್ಟ್ ಆಗಿ ನೀಡಬೇಡಿ. ಇದು ಇಬ್ಬರನ್ನು ಪ್ರತ್ಯೇಕಿಸುವ ಸಂಕೇತವಾಗಿದೆ. ನಿಮ್ಮ ಉಡುಗೊರೆ ನಿಮ್ಮನ್ನು ದೂರ ಮಾಡಬಹುದು.
ವಾಚ್ : ವಾಸ್ತು ಪ್ರಕಾರ, ನೀವು ವಾಚನ್ನು ಉಡುಗೊರೆ ರೂಪದಲ್ಲಿ ಕೊಡಬಾರದು. ಇದರಿಂದ ಜೀವನದ ಪ್ರಗತಿಯ ಹಾದಿಯಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.