![](https://kannadadunia.com/wp-content/uploads/2024/01/f2094f57-43eb-42b2-a65d-34ae0ec05f1a-1024x587.jpg)
ಭರತ್ ತೋಪಯ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವಜ್ರಮುನಿ’ ಚಿತ್ರದ ಟೀಸರ್ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ಭರ್ಜರಿ ವೀಕ್ಷಣೆ ಪಡೆಯುವ ಮೂಲಕ ನೋಡುಗರ ಗಮನ ಸೆಳೆದಿದೆ.
ಈ ಸಿನಿಮಾದಲ್ಲಿ ಸಂಪತ್, ಯಶ್ ಶೆಟ್ಟಿ, ವಿಕ್ರಾಂತ್ ಮತ್ತು ಸುನಿಲ್ ತೆರೆ ಹಂಚಿಕೊಂಡಿದ್ದು, Snd ಪಿಚ್ಚರ್ಸ್ ಬ್ಯಾನರ್ ನಡಿ ಸಂಪತ್ ನಿರ್ಮಾಣ ಮಾಡಿದ್ದಾರೆ.
ಆರ್ ಕೃಷ್ಣ ಸಂಕಲನವಿದ್ದು, ಶ್ರೀನಿವಾಸ ರಾಜು ಛಾಯಗ್ರಹಣವಿದೆ. ಇನ್ನುಳಿದಂತೆ ಪ್ರವೀಣ್ ಕುಮಾರ್ ಬೊಮ್ಮಘಟ್ಟ ಡೈಲಾಗ್ ಬರೆದಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.