alex Certify ರಾಹುಲ್ ಗಾಂಧಿಯನ್ನು ಶಿರಡಿ ಸಾಯಿಬಾಬಾರಿಗೆ ಹೋಲಿಸಿದ ರಾಬರ್ಟ್ ವಾದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿಯನ್ನು ಶಿರಡಿ ಸಾಯಿಬಾಬಾರಿಗೆ ಹೋಲಿಸಿದ ರಾಬರ್ಟ್ ವಾದ್ರಾ

‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಯವರನ್ನು ಅವರ ಭಾವ ರಾಬರ್ಟ್ ವಾದ್ರಾ ಶಿರಡಿಯ ಸಾಯಿಬಾಬಾ ಅವರಿಗೆ ಹೋಲಿಸಿದ್ದಾರೆ. ಭಾನುವಾರದಂದು ಶಿರಡಿಗೆ ಭೇಟಿ ನೀಡಿದ್ದ ರಾಬರ್ಟ್ ವಾದ್ರಾ ಈ ಮಾತುಗಳನ್ನಾಡಿದ್ದಾರೆ.

ಶಿರಡಿ ಸಾಯಿಬಾಬಾ ಮಂದಿರಕ್ಕೆ ಭಾನುವಾರದಂದು ಭೇಟಿ ನೀಡಿದ್ದ ಅವರು, ಆಧ್ಯಾತ್ಮಿಕ ಚಿಂತಕ ಸಾಯಿಬಾಬಾ ಅವರು ಸಮಾನತೆಯನ್ನು ಬೋಧಿಸಿದ್ದು, ರಾಹುಲ್ ಗಾಂಧಿಯವರು ಸಹ ಇಂತಹ ಆಲೋಚನೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು.

ಬಾಬಾ ಅವರ ಆಶೀರ್ವಾದ ರಾಹುಲ್ ಗಾಂಧಿ ಮೇಲಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ ರಾಬರ್ಟ್ ವಾದ್ರಾ, ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...