alex Certify ಗೋಮಾಂಸ ಮಿಶ್ರಿತ ಸಮೋಸ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರು ಸೇರಿ ನಾಲ್ವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಮಾಂಸ ಮಿಶ್ರಿತ ಸಮೋಸ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರು ಸೇರಿ ನಾಲ್ವರು ಅರೆಸ್ಟ್

ಗುಜರಾತ್‌ನ ವಡೋದರಾದಲ್ಲಿ ಗೋಮಾಂಸ ಮಿಶ್ರಿತ ಸಮೋಸಗಳನ್ನು ಮಾರಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸೋಮವಾರ ಮಾಲೀಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ವಡೋದರಾದ ಪಾನಿಗೇಟ್ ಪ್ರದೇಶದಲ್ಲಿ ಹುಸೇನಿ ಸಮೋಸಾ ಕೇಂದ್ರದ ಮೇಲೆ ದಾಳಿ ನಡೆಸಿ 113 ಕೆಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಹಸುವಿನ ಮಾಂಸ ಎಂದು ದೃಢಪಟ್ಟಿದೆ.

ಮಾಲೀಕರಾದ ಯೂಸುಫ್ ಶೇಖ್ ಮತ್ತು ನಯೀಮ್ ಶೇಖ್ ಮತ್ತು ಅವರ ನಾಲ್ವರು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಮಾಲೀಕರು ಇಮ್ರಾನ್ ಖುರೇಷಿ ಗೋಮಾಂಸವನ್ನು ಸರಬರಾಜು ಮಾಡುತ್ತಿದ್ದುದನ್ನು ಬಹಿರಂಗಪಡಿಸಿದರು. ಅವರ ಮಾಹಿತಿ ಆಧರಿಸಿ ಪೊಲೀಸರು ಖುರೇಷಿಯನ್ನು ಬಂಧಿಸಿದ್ದಾರೆ.

ವಡೋದರಾದ ಉಪ ಪೊಲೀಸ್ ಆಯುಕ್ತ ಪನ್ನಾ ಮೊಮಯ ಮಾತನಾಡಿ, ಕೆಲವರು ಮನೆಯೊಂದರಿಂದ ಹಸುವಿನ ಮಾಂಸವನ್ನು ಬಳಸಿ ಸಮೋಸ ಮಾರಾಟ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ನಾವು ದಾಳಿ ನಡೆಸಿ 61 ಕೆಜಿ ಸಿದ್ಧಪಡಿಸಿದ ಸಮೋಸ, 113 ಕೆಜಿ ಗೋಮಾಂಸ, 152 ಕೆಜಿ ಸಮೋಸವನ್ನು ವಶಪಡಿಸಿಕೊಂಡಿದ್ದೇವೆ. ನಾವು ವಸ್ತುವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ, ಅದು ಹಸುವಿನ ಮಾಂಸ ಎಂದು ದೃಢಪಡಿಸಿದೆ ಎಂದು ತಿಳಿಸಿದ್ದಾರೆ.

ಅಂಗಡಿ ನಡೆಸುತ್ತಿರುವವರು ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಆಹಾರ ಸುರಕ್ಷತಾ ಇಲಾಖೆಯಿಂದ ಯಾವುದೇ ಪರವಾನಗಿ ಹೊಂದಿಲ್ಲ. ಅವರು ತಮ್ಮ ಗ್ರಾಹಕರಿಗೆ ಈ ಬಗ್ಗೆ ತಿಳಿಸದೇ, ಯಾವುದೇ ಮಾಹಿತಿ ನೀಡದೇ ನಗರದಾದ್ಯಂತ ಈ ಸಮೋಸಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಡಿಸಿಪಿ ಹೇಳಿದರು.

ರಾಜ್ಯ ಸರ್ಕಾರವು 2017 ರಲ್ಲಿ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಿದೆ. ತಿದ್ದುಪಡಿ ಮಾಡಲಾದ ಕಾಯ್ದೆ ಪ್ರಕಾರ ಗೋಹತ್ಯೆಗಾಗಿ 1-5 ಲಕ್ಷ ರೂ.ವರೆಗೆ ದಂಡ ಜೊತೆಗೆ ಜೀವಾವಧಿಯ ನಿಬಂಧನೆಯನ್ನು ಒಳಗೊಂಡಿರುತ್ತದೆ. ಈ ಪ್ರಕರಣ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...