ಫೆಂಗ್ ಶೂಯಿ ಸಲಹೆಗಳು ತುಂಬಾ ಸರಳವಾಗಿರುವುದರಿಂದ ಇತರ ದೇಶ ಸೇರಿದಂತೆ ಭಾರತದಲ್ಲಿ ಇದನ್ನು ಅನುಸರಿಸುತ್ತಾರೆ. ಫೆಂಗ್ ಎಂದ್ರೆ ಗಾಳಿ, ಶೂಯಿ ಎಂದ್ರೆ ನೀರು ಎಂದರ್ಥ. ಜೀವನದಲ್ಲಿ ಸುಖ- ಶಾಂತಿ ಪಡೆಯಲು ಫೆಂಗ್ ಶೂಯಿಯಲ್ಲಿ ಸಾಕಷ್ಟು ಉಪಾಯಗಳನ್ನು ಹೇಳಲಾಗಿದೆ. ದಾಂಪತ್ಯ ಗಟ್ಟಿಯಾಗಲು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನೂ ಇದರಲ್ಲಿ ಹೇಳಲಾಗಿದೆ.
ಫೆಂಗ್ ಶೂಯಿ ಪ್ರಕಾರ ಬೆಡ್ ರೂಂ ನ ಕಿಟಕಿ ಪಕ್ಕದಲ್ಲಿ ಹಾಸಿಗೆಯನ್ನು ಹಾಕಬಾರದು. ಕಿಟಕಿ ಪಕ್ಕದಲ್ಲಿ ದಂಪತಿ ಒಂದಾಗಬಾರದು. ಹಾಸಿಗೆ ಹಾಕುವುದು ಅನಿವಾರ್ಯವಾದಲ್ಲಿ ಕಿಟಕಿ ಬಾಗಿಲುಗಳು ಮುಚ್ಚಿರಬೇಕು. ಹಾಗೆ ಪರದೆಯಿಂದ ಮುಚ್ಚಿರಬೇಕು.
ಹರಿದಿರುವ ಹಾಗೆ ಸಣ್ಣ ಸಣ್ಣ ರಂಧ್ರಗಳಿರುವ ಚಾದರವನ್ನು ಬಳಸಬಾರದು. ಜಗಳ, ಹೋರಾಟ, ಯುದ್ಧದ ಚಿತ್ರಗಳಿರುವ ಬೆಡ್ ಶೀಟ್ ಬಳಸಬಾರದು.
ಹಾಸಿಗೆಯ ಕೆಳಗೆ ಯಾವುದೇ ವಸ್ತುಗಳನ್ನು ಇಡಬಾರದು. ಹಾಸಿಗೆ ಕೆಳಗೆ ವಸ್ತುಗಳನ್ನಿಟ್ಟರೆ ಪತಿ- ಪತ್ನಿ ನಡುವೆ ಒತ್ತಡ ಜಾಸ್ತಿಯಾಗುತ್ತದೆ.
ಮಲಗುವ ಕೋಣೆಯಲ್ಲಿ ಟಿವಿ, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬಾರದು. ಇದರಿಂದ ಬರುವ ಅಲೆಗಳು ಕೋಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತವೆ.
ತಿಳಿ ಬಣ್ಣ ಶಾಂತಿ ಹಾಗೂ ಪ್ರೀತಿಯನ್ನು ಹೆಚ್ಚಿಸುತ್ತದೆ. ಬೆಡ್ ರೂಂನಲ್ಲಿ ತಿಳಿ ಬಣ್ಣ ಬಳಿಯಿರಿ. ಯಾವ ಕಾರಣಕ್ಕೂ ಡಾರ್ಕ್ ಹಾಗೂ ಕಪ್ಪು ಬಣ್ಣವನ್ನು ಹಚ್ಚಬೇಡಿ.