![](https://kannadadunia.com/wp-content/uploads/2023/05/v-somanna-dh-1199870-1678760923-1200215-1678837914.png)
ಬೆಂಗಳೂರು: ಯಾವುದೋ ಕಾರಣಕ್ಕೆ ಬಿಜೆಪಿ ವಿರುದ್ಧ ಮುನಿಸಿಕೊಂಡು ಪಕ್ಷವನ್ನೇ ಬಿಟ್ಟು ಹೋಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ವರಿಷ್ಠರು ಮತ್ತೆ ಕರೆತಂದಿದ್ದು ಸಂತಸದ ವಿಚಾರ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಜಗದೀಶ್ ಶೆಟ್ಟರ್ ಹಾಗೂ ಇಡೀ ಕುಟುಂಬ ಆರ್ ಎಸ್ ಎಸ್ ನೊಂದಿಗೆ ಬೆಳೆದು ಬಂದಿದೆ. ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದೆ. ಆದರೆ ಯಾವುದೋ ಕಾರಣಕ್ಕೆ ಮುನಿಸಿಕೊಂಡು ಪಕ್ಷ ಬಿಟ್ಟು ಹೋಗಿದ್ದರು. ಅವರನ್ನು ವಾಪಾಸ್ ಕರೆತಂದ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದರು.
ಇನ್ನು ದೇಶದ 142 ಕೋಟಿ ಜನ ಈಗಾಗಲೇ ನಿರ್ಧಾರಿಸಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿ ಪ್ರಧಾನಿ ಮೋದಿಯವರಿಂದ ಸಾಧ್ಯ ಅನ್ನುವುದು ಜನರಿಗೆ ಮನವರಿಕೆ ಆಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನೋಡುವುದು ಭಾರತೀಯರ ಶತಮಾನಗಳ ಕನಸಾಗಿತ್ತು. ಆ ಕನಸನ್ನು ಮೋದಿಯವರು ಸಾಕಾರ ಮಾಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರ ಮೇಲೆ ದೇಶದ ಜನತೆಗೆ ವಿಶ್ವಾಸ ಹೆಚ್ಚಿದೆ ಎಂದು ಹೇಳಿದರು.