ತುಮಕೂರು: ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ತುಮಕೂರು ಕ್ಷೇತ್ರಕ್ಕೆ ಆಗಮಿಸಿದ್ದ ವಿ. ಸೋಮಣ್ಣ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸೋಮಣ್ಣ ಭೇಟಿ ವೇಳೆ ಹಾಜರಿರದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಜಿ. ಪ್ರಭು ಅವರನ್ನು ಸೋಮಣ್ಣ ತರಾಟೆಗೆ ತೆಗೆದುಕೊಂಡಿದ್ದು, ಗಿಡ ನೆಡುವುದು ದೊಡ್ಡದಾ, ಜೀವ ದೊಡ್ಡದಾ ಎಂದು ಪ್ರಶ್ನಿಸಿದ್ದಾರೆ.
ನನ್ನ ಉಪಸ್ಥಿತಿಯಲ್ಲಿ ಇರಬೇಕಾ ಬೇಡವಾ? ನಾನು ಸಚಿವ ಅಲ್ಲವೇ? ನನ್ನ ಇಲಾಖೆಯದು, ಕೇಂದ್ರ ಸರ್ಕಾರದ್ದು ನಿಮಗೆ ಸಂಬಂಧವೇ ಇಲ್ಲ ಅಂತೀರಾ? ನೀವು ಮಂತ್ರಿಯಾಗಿ ನಾನು ಜಿಲ್ಲಾಧಿಕಾರಿಯಾಗಿದ್ದಾರೆ ಏನು ಮಾಡ್ತಾ ಇದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯ ಕಲುಷಿತ ನೀರು ಸೇವನೆ ಪ್ರಕರಣ ಕಿನ್ನಲೆಯಲ್ಲಿ ಸೋಮಣ್ಣ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಕೊರಟಗೆರೆಯಲ್ಲಿ ಭಾಗಿಯಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಪ್ರಭು ಅವರು ಸೋಮಣ್ಣ ಸ್ವಾಗತಕ್ಕೆ ಗೈರು ಹಾಜರಾಗಿದ್ದರು.
ಜಿಲ್ಲಾಸ್ಪತ್ರೆಯಿಂದಲೇ ಇಬ್ಬರಿಗೂ ಕರೆ ಮಾಡಿದ ಸೋಮಣ್ಣ, ಗಿಡ ನೆಡುವುದು ದೊಡ್ಡದಾ ಜೀವ ದೊಡ್ಡದಾ ಎಂದು ಅಧಿಕಾರಿಗಳನ್ನು ತಾರಾಟೆಗೆ ತೆಗೆದುಕೊಂಡಿದ್ದಾರೆ.