alex Certify BIG NEWS: ನಾಮಪತ್ರ ಸಲ್ಲಿಕೆ ವೇಳೆ ಪೊಲೀಸರೊಂದಿಗೆ ವಿ.ಸೋಮಣ್ಣ ಕಿರಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಮಪತ್ರ ಸಲ್ಲಿಕೆ ವೇಳೆ ಪೊಲೀಸರೊಂದಿಗೆ ವಿ.ಸೋಮಣ್ಣ ಕಿರಿಕ್

ತುಮಕೂರು: ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪೊಲಿಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಇಂದು ನಾಮಪತ್ರ ಸಲ್ಲಿಕೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ಅಭ್ಯರ್ಥಿ ಸೇರಿ ಐದು ಜನರಿಗಷ್ಟೇ ಡಿಸಿ ಕಚೇರಿ ಒಳಗೆ ಹೋಗಲು ಅವಕಾಶ ಎಂದು ತಿಳಿಸಿದ್ದಾರೆ. ಇದಕ್ಕೆ ಗರಂ ಆದ ವಿ.ಸೋಮಣ್ಣ ತುಮಕೂರು ಡಿವೈ ಎಸ್ ಪಿ ಚಂದ್ರಶೇಖ್ ಅವರೊಂದಿಗೆ ಏನು ತಮಾಷೆ ಮಡ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಪೊಲೀಸ್ ಅಧಿಕಾರಿಗಳು ಸೋಮಣ್ಣ ಅವರನ್ನು ತಡೆದು ಬೆಂಬಲಿಗರು ಕಚೇರಿ ಒಳಗೆ ಹೋಗಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಅದಕ್ಕೆ ಸೋಮಣ್ಣ, ನಾಮಪತ್ರ ಮೂರು ಸೆಟ್ ಗಳಿವೆ. ಹಾಗಾಗಿ ಮುಖಂಡರನ್ನು ಒಳಗಡೆಗೆ ಬಿಡಬೇಕು ಎಂದು ತಾಕೀತು ಮಾಡಿದ್ದಾರೆ. ಈ ವೇಳೆ ಪೊಲೀಸರು ಅಭ್ಯರ್ಥಿ ಸೇರಿದಂತೆ 5 ಜನರಿಗೆ ತೆರಳಲು ಮಾತ್ರ ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಳಿಕ ವಿ.ಸೋಮಣ್ಣ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...