
ಬೆಂಗಳೂರು: ಉತ್ತರಾಖಂಡ್ ನಲ್ಲಿ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವನ್ನಪ್ಪಿದ್ದು, ಇದೀಗ ಮತ್ತೆ ಇಬ್ಬರ ಮೃತದೇಹ ಬೆಂಗಳೂರು ಏರ್ ಪೋರ್ಟ್ ಗೆ ಆಗಮಿಸಿದೆ.
ಈಗಾಗಲೇ ಮೃತ ಪದ್ಮಿನಿ ಹೆಗಡೆ, ವೆಂಕಟೇಶ್ ಪ್ರಸಾದ್ ಕೆ, ಆಶಾ ಎಂಬುವವರ ಮೃತದೇಹ ಏರ್ ಪೋರ್ಟ್ ಗೆ ಬಂದಿದ್ದು, ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರ ಮೃತದೇಹವನ್ನು ರವಾನಿಸಲಾಗಿದೆ.
ಕೃಷ್ಣಮೂರ್ತಿ, ಸಿಂಧೂ ವಾಕೇಕಾಲಮ್ ಎಂಬುವವರ ಮೃತದೇಹ ಆಗಮಸಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತಿದೆ. ಈವರೆಗೆ ಐವರ ಮೃತದೇಹ ಆಗಮಿಸಿದ್ದು, ಇನ್ನೂ ನಾಲ್ವರ ಮೃತದೇಹ ದೆಹಲಿ ಏರ್ ಪೋರ್ಟ್ ನಿಂದ ಬೆಂಗಳೂರಿಗೆ ರವಾನಿಸಲಾಗುತ್ತಿದೆ.
ಚಾರಣದ ವೇಳೆ ಯಾವುದೇ ಅವಘಡದಿಂದ 9 ಜನರು ಸಾವನ್ನಪ್ಪಿಲ್ಲ, ಬದಲಾಗಿ ವಿಪರೀತ ಚಳಿ, ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾಗಿ ಚಾರಣ ಆಯೋಜ ನಾಗೇಂದ್ರ ತಿಳಿಸಿದ್ದಾರೆ.