ಉತ್ತರ ಕಾಶಿ: ಉತ್ತರಾಖಂಡ್ ಗೆ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಲ್ವರು ಕನ್ನಡಿಗರ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ರಾಜ್ಯಕ್ಕೆ ರವಾನಿಸಲು ಸಿದ್ಧತೆ ನಡೆಸಲಾಗಿದೆ.
ಉತ್ತರಾಖಂಡದ ಉತರ ಕಾಶಿ ಜಿಲ್ಲೆಯ ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ಹವಾಮಾನ ವೈಫರೀತ್ಯದಿಂದ 9 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಭಾರತೀಯ ವಾಯುಸೇನೆ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ನಾಲ್ವರು ಕನ್ನಡಿಗರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಪದ್ಮನಾಭ ಕೆ.ಪಿ, ವೆಂಕಟೇಶ ಪ್ರಸಾದ ಕೆ.ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಚಾರ್ಟರ್ ಫ್ಲೈಟ್ ಮೂಲಕ ರಾಜ್ಯಕ್ಕೆ ರವಾನಿಸಲಾಗುತ್ತಿದೆ.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಒಟ್ಟು 15 ಜನರು ಚಾರಣಕ್ಕೆ ತೆರಳಿದ್ದರು. ಮೂವರು ಮಾತ್ರ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ. ಐಎ ಎಸ್ ಅಧಿಕಾರಿ ವಿಪುಲ್ ಬನ್ಸಾಲ್ ನೇತೃತ್ವದಲ್ಲಿ ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ: 9480474949