ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಳ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈಗ ಮತ್ತೊಬ್ಬ ಯುವಕ ತನ್ನ ಕೈಕಾಲು ಮುರಿದುಕೊಂಡಿದ್ದಾನೆ. ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿನಲ್ಲಿ ರೀಲ್ ಮಾಡುವಾಗ ಮೊಬೈಲ್ ಕೆಳಗೆ ಬಿದ್ದಿದೆ. ಅದನ್ನು ತೆಗೆಯಲು ಯುವಕ ರೈಲಿನಿಂದ ಕೆಳಗೆ ಜಿಗಿದಿದ್ದಾನೆ. ಈ ವೇಳೆ ಆತನ ಕೈ ಕಾಲು ಮುರಿದಿದೆ.
ಉತ್ತರ ಪ್ರದೇಶದ ಸೀತಾಪುರದ ನಿವಾಸಿ ಮೋಹನ್ ಲಾಲ್ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ದೆಹಲಿಗೆ ತೆರಳಲು ಕತ್ಗೊಡಮ್ ರೈಲು ನಿಲ್ದಾಣದಿಂದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಹತ್ತಿದ್ದರು.ಅವರ 22 ವರ್ಷದ ಮಗ ಶಿವಂ ಮೌರ್ಯ, ಬಾಗಿಲ ಬಳಿ ನಿಂತು ರೀಲ್ ಮಾಡ್ತಿದ್ದಾಗ ಕೈಯಿಂದ ಮೊಬೈಲ್ ಬಿದ್ದಿದೆ. ಇದನ್ನು ಕಂಡ ಕೂಡಲೇ ಮೊಬೈಲ್‌ಗಾಗಿ ಚಲಿಸುತ್ತಿದ್ದ ರೈಲಿನಿಂದ ಜಿಗಿದ ಶಿವಂ ಗಾಯಗೊಂಡಿದ್ದಾನೆ.
ಆತನನ್ನು ಪೊಲೀಸರು ಸುಶೀಲಾ ತಿವಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತ್ರ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಸೀತಾಪುರಕ್ಕೆ ಕರೆದೊಯ್ದಿದ್ದಾರೆ. ಉತ್ತರಾಖಂಡ ಸೇರಿದಂತೆ ಭಾರತದಾದ್ಯಂತ ರೀಲ್ ಗೆ ಪ್ರಾಣ ಬಿಡ್ತಿರುವವರ ಸಂಖ್ಯೆ ಹೆಚ್ಚಾಗಿದೆ.